ಇಂಡೋ-ಪಾಕ್ ಕ್ರಿಕೆಟ್ : ಸಲ್ಮಾನ್ ಖಾನ್ ಮತ್ತು ಶಿವಣ್ಣ ಮುಖಾಮುಖಿ

Public TV
1 Min Read
Salman with shivanna 1

ಹಮದಾಬಾದ್ ನಲ್ಲಿ ನಡೆಯುತ್ತಿರುವ ಇಂಡಿಯಾ-ಪಾಕಿಸ್ತಾನ (Pakistan) ಪಂದ್ಯವನ್ನು (Cricket) ವೀಕ್ಷಿಸುವುದಕ್ಕಾಗಿ ಮತ್ತು ಟೀಮ್ ಇಂಡಿಯಾವನ್ನು (India) ಹುರುದುಂಬಿಸುವುದಕ್ಕಾಗಿ ನಟ ಶಿವರಾಜ್ ಕುಮಾರ್ (Shivaraj Kumar) ಕ್ರಿಕೆಟ್ ಮೈದಾನದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಸಲ್ಮಾನ್ ಖಾನ್ (Salman Khan)ಕೂಡ ಕ್ರಿಕೆಟ್ ವೀಕ್ಷಿಸಲು ಆಗಮಿಸಿದ್ದಾರೆ.

Salman with shivanna 2

ತಾವು ಕ್ರಿಕೆಟ್ ನೋಡಲು ಹೋಗುತ್ತಿರುವ ಕುರಿತು ಶಿವರಾಜ್ ಕುಮಾರ್ ಕೆಲ ಗಂಟೆಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ‘ಇಂಡಿಯಾ-ಪಾಕಿಸ್ತಾನ ಮ್ಯಾಚ್ ಜೊತೆಯಲಿ ನಾನು. ಇದ್ಕಿಂತ ಹಬ್ಬಾ ಬೇಕಾ? ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈಗ ಮೈದಾನದಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ.

Shivaraj kumar 2

ವಿಶ್ವಕಪ್‌ ಟೂರ್ನಿಯ ರೋಚಕ ಇಂಡೋ-ಪಾಕ್‌ ಸಮರ ಶುರುವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಈ ಪಂದ್ಯ ನೋಡಲು ಮೈದಾನಕ್ಕೆ ಜನಸಾಗರವೇ ಹರಿದು ಬಂದಿದೆ. ಎಲ್ಲ ಟಿಕೆಟ್​ಗಳು ಕೂಡ ಸೋಲ್ಡ್​ ಔಟ್​ ಆಗಿದ್ದು, ಟಿಕೆಟ್​ ಸಿಗದ ಕೆಲವರು ಸ್ಟೇಡಿಯಂನ ಹೊರ ಭಾಗದಲ್ಲಿ ಭಾರತ ತಂಡದ ಜೆರ್ಸಿಯನ್ನು ಹಾಕಿ ಸಂಭ್ರಮಾಚರಣೆ ಮಾಡುವ ಮೂಲಕ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

Shivaraj kumar 1

ಮಧ್ಯಾಹ್ನ 12.30ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು, ಬಾಲಿವುಡ್​ ಗಾಯಕರಾದ ಶಂಕರ್​ ಮಹಾದೇವನ್​, ಸುಖ್ವಿಂದರ್​ ಸಿಂಗ್​, ಅರ್ಜಿತ್​ ಸಿಂಗ್​ ಸಂಗೀತ ಸುಧೆ ಹರಿಸಿದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ ಹಲವು ಮಾಜಿ ಆಟಗಾರರು ಈ ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಆಗಮಿಸಿದ್ದಾರೆ.

 

ಪ್ರತಿಬಾರಿ ಭಾರತದ ಗೆಲುವಿಗಾಗಿ ದೇಶದ ಹಲವು ಕಡೆಗಳಲ್ಲಿ ಅಭಿಮಾನಿಗಳು ಪೂಜೆ ಮತ್ತು ಪ್ರಾರ್ಥನೆ ನಡೆಸಿದ್ದಾರೆ. ಪಂದ್ಯಕ್ಕೆ ಭಾರೀ ಕಟ್ಟೆಚ್ಚರ ವಹಿಸಿದ್ದು, ಗುಜರಾತ್​ ಪೊಲೀಸ್​, ಎನ್​ಎಸ್​ಜಿ, ಆರ್‌ಎಎಫ್‌​, ಗೃಹರಕ್ಷಣಾ ಪಡೆ ಸಹಿತ ಕ್ರೀಡಾಂಗಣದ ಸುತ್ತ ವಿವಿಧ ಭದ್ರತಾ ಏಜೆನ್ಸಿಗಳಿಂದ ಒಟ್ಟು 11 ಸಾವಿರ ರಕ್ಷಣಾ ಸಿಬ್ಬಂದಿಯನ್ನು ಬಿಗಿಭದ್ರತೆಗಾಗಿ ನಿಯೋಜಿಸಲಾಗಿದೆ.

Web Stories

Share This Article