ಕಠ್ಮಂಡು: ಇಂಡೋ-ಫ್ರೆಂಚ್ ಸರಣಿ ಹಂತಕ (Indo-French serial killer) ಚಾರ್ಲ್ಸ್ ಶೋಭರಾಜ್ (Charles Sobhraj) ನನ್ನ ಜೈಲಿನಿಂದ ಬಿಡುಗಡೆಗೊಳಿಸುವಂತೆ ನೇಪಾಳ ಸುಪ್ರೀಂ ಕೋರ್ಟ್ (Nepal Supreme Court) ಇಂದು ಆದೇಶಿಸಿದೆ.
19 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಚಾರ್ಲ್ಸ್ ಶೋಭರಾಜ್‌ಗೆ ವಯಸ್ಸಿನ ಆಧಾರದ ಮೇಲೆ ಬಿಡುಗಡೆಗೆ ಆದೇಶಿಸಿದೆ. ಅಲ್ಲದೇ ಬಿಡುಗಡೆಯಾದ 15 ದಿನಗಳಲ್ಲೇ ಆತನನ್ನು ಗಡಿಪಾರು ಮಾಡುವಂತೆಯೂ ನ್ಯಾಯಾಲಯ (Court) ಆದೇಶಿಸಿದೆ. ಇದನ್ನೂ ಓದಿ: ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್
Advertisement
Advertisement
ಶೋಭರಾಜ್ 2003ರಿಂದಲೂ ಕಠ್ಮಂಡು ಕೇಂದ್ರ ಕಾರಾಗೃಹದಲ್ಲೇ (Kathmandu Central Jail) ಬಂಧಿತನಾಗಿದ್ದ. ಸುಳ್ಳು ಪಾಸ್‌ಪೋರ್ಟ್ (Passport) ಬಳಸಿ ಪ್ರಯಾಣ ಹಾಗೂ 1975ರಲ್ಲಿ ಅಮೆರಿಕದ (US) ಪ್ರವಾಸಿ ಕೊನ್ನಿ ಜೋ ಬೊರೊನ್ಜಿಚ್ (29), ಕೆನಡಾದ ಲಾರೆಂಟ್ ಕ್ಯಾರಿಯೆರ್ (26) ಎಂಬವರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಕಠ್ಮಂಡು ಮತ್ತು ಭಕ್ತಾಪುರ ಜಿಲ್ಲಾ ನ್ಯಾಯಾಲಯಗಳು ಶೋಭರಾಜ್‌ನನ್ನು ದೋಷಿ ಎಂದು ಗುರುತಿಸಿ, ಯುಎಸ್ ಪ್ರಜೆಯ ಹತ್ಯೆಗೆ 20 ವರ್ಷ ಹಾಗೂ ನಕಲಿ ಪಾಸ್‌ಪೋರ್ಟ್ ಬಳಸಿದ್ದಕ್ಕಾಗಿ ಒಂದು ವರ್ಷ ಶಿಕ್ಷೆ ವಿಧಿಸಿದ್ದವು.
Advertisement
Advertisement
ಕಠ್ಮಂಡು ಜಿಲ್ಲಾ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ 2010ರಲ್ಲಿ ಎತ್ತಿಹಿಡಿದಿತ್ತು. ನಂತರ 2014ರಲ್ಲಿ ಕೆನಡಾದ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಭಕ್ತಾಪುರ ಜಿಲ್ಲಾ ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿತ್ತು. ಇದೀಗ ಶೋಭರಾಜ್‌ಗೆ 78 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಕೋರ್ಟ್ ಬಿಡುಗಡೆಗೆ ಆದೇಶಿಸಿದೆ. ಇದನ್ನೂ ಓದಿ: ಮೋದಿ ನವಭಾರತದ ಪಿತಾಮಹ – ಪ್ರಧಾನಿ ಗುಣಗಾನ ಮಾಡಿದ ಮಹಾರಾಷ್ಟ್ರ ಡಿಸಿಎಂ ಪತ್ನಿ