ಬೆಂಗಳೂರು: ವ್ಯಕ್ತಿಯೊಬ್ಬ ಸಚಿವ ಡಿ.ಕೆ ಶಿವಕುಮಾರ್ ಆಪ್ತ ಶಾಖಾಧಿಕಾರಿ ಎಂದು ಹೇಳಿಕೊಂಡು ಯುವಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ಬರೋಬ್ಬರಿ 14 ಲಕ್ಷ ರೂ.ಯನ್ನು ದೋಚಿ ಮೋಸ ಮಾಡಿದ್ದಾನೆ.
ಕೆಪಿಎಸ್‍ಸಿ ನೌಕರಿಯ ಆಕಾಂಕ್ಷೆಯಲ್ಲಿದ್ದ ವೆಂಕಟೇಶ್ ಮೋಸ ಹೋದ ಯುವಕ. ಮಂಜುನಾಥ್ ಎಂಬಾತ ತಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಹೇಳಿ ಮೋಸ ಮಾಡಿದ್ದಾನೆ. ಮಂಜುನಾಥ್ 2015ರಲ್ಲಿ ವೆಂಕಟೇಶ್ ನನ್ನ ಪರಿಚಯ ಮಾಡಿಕೊಂಡಿದ್ದನು. ಆಗ ತಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಹೇಳಿ ನಕಲಿ ಐಡಿ ತೋರಿಸಿ ಹಂತ ಹಂತವಾಗಿ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ.
Advertisement
ಮೋಸ ಮಾಡಿದ್ದು ಹೇಗೆ?:
ಮಂಜುನಾಥ್ ರಾಜಾಜಿನಗರದಲ್ಲಿರುವ ಗೃಂಥಾಲಯಕ್ಕೆ ಹೋಗುವಾಗ ನಮ್ಮನ್ನು ಪರಿಚಯ ಮಾಡಿಕೊಂಡಿದ್ದರು. ನಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿಯಾಗಿದ್ದೇನೆ. ನಮಗೆ ಕೆಪಿಎಸ್‍ಸಿಯಲ್ಲಿ ಪರಿಚಯ ಇದ್ದಾರೆ. ಕಂದಾಯ ಇಲಾಖೆಯಲ್ಲಿ ಕೆಪಿಎಸ್‍ಸಿ ಮೆಂಬರ್ ಕೋಟಾದಡಿ ಕೆಲಸ ಕೊಡಿಸೋದಾಗಿ ಹೇಳಿದ್ದನು. ಮೊದಲು ನಾನು ನಂಬಿರಲಿಲ್ಲ. ಬಳಿಕ ಐಡಿ ಕಾರ್ಡ್ ತೋಸಿದ್ದರು. ಅದರಲ್ಲಿ ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಇತ್ತು. ಆದರೂ ನಾನು ನಂಬಿರಲಿಲ್ಲ. ಬಳಿಕ ದಿನ ಕಳೆದಂತೆ ಪ್ರತಿದಿನ ಪರಿಚಯ ಮಾಡಿಕೊಂಡರು.
Advertisement
Advertisement
ಮಂಜುನಾಥ್ ನಾನು ಕೆಲಸ ಕೊಡಿಸುತ್ತೇನೆ ಎಂದು ಹಂತ ಹಂತವಾಗಿ ಹಣ ಪಡೆದುಕೆಂಡಿದ್ದಾನೆ. ನಾನು ಹಣವನ್ನು ಟ್ರಾನ್ಸ್ ಫರ್ ಮಾಡುತ್ತೀನಿ ಎಂದಾಗ ಬೇಡ ಅಧಿಕಾರಿಗಳಿಗೆ ಕೊಡಬೇಕು ಎಂದು ನಗದು ರೂಪದಲ್ಲಿ ಪಡೆದುಕೊಂಡಿದ್ದಾನೆ. ಆದರೆ ಒಂದು ಬಾರಿ ಸುಮಾರು 3 ಲಕ್ಷ 60 ಸಾವಿರ ರೂ. ಯನ್ನು ಬ್ಯಾಂಕಿಗೆ ಕಳುಹಿಸಿದ್ದೆ. ಆ ದಾಖಲಾತಿ ನನ್ನ ಬಳಿ ಇದೆ. 6 ತಿಂಗಳ ಹಿಂದೆ ಒಂದು ನಕಲಿ ಅಪಾಯಿಂಟ್ ಮೆಂಟ್ ಆರ್ಡರ್ ಕಾಪಿಯನ್ನು ನಮ್ಮ ಮನಗೆ ಕಳುಹಿಸಿದ್ದನು. ಆಗ ಆರ್ಡರ್ ಕಾಪಿ ನಕಲಿ ಎಂದು ತಿಳಿಯಿತು. ಈ ಬಗ್ಗೆ ಕಂದಾಯ ಇಲಾಖೆಯೊಳಗೆ ಹೋಗಲು ಸಾಧ್ಯವಾಗಲಿಲ್ಲ.
Advertisement
ಒಂದು ದಿನ ನನ್ನ ಸಹೋದರನ ಜೊತೆ ಕಂದಾಯ ಇಲಾಖೆಗೆ ಒಳ ಹೋಗಿ ವಿಚಾರಿಸಿದಾಗ ಅದು ನಕಲಿ ಎಂದು ತಿಳಿಯಿತು. ಬಳಿಕ ಆತನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದೆ. ಆದರೆ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಬಳಿಕ ನಿಮ್ಮ ಮನೆಗೆ ಬಂದು ಗಲಾಟೆ ಮಾಡುವುದಾಗಿ ಹೇಳಿದಾಗ ಹಣ ಹಿಂದಿರುಗಿಸುವುದಾಗಿ ಹೇಳಿದ್ದನು. ಆದರೆ ಇನ್ನು ಹಣವನ್ನು ನೀಡಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡಿಲ್ಲ ಎಂದು ಹಣ ಕಳೆದುಕೊಂಡ ವೆಂಕಟೇಶ್ ಹೇಳಿದ್ದಾರೆ.
ಆರೋಪಿ ಮಂಜುನಾಥ್ ಹಲವಾರು ಯುವಕರಿಗೆ ಇದೇ ರೀತಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದರು. ಸದ್ಯಕ್ಕೆ ಸುಬ್ರಮಣ್ಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.