ಉಡುಪಿ: ಅಶಿಸ್ತೇ ಬಿಜೆಪಿ ನಾಯಕರ ಶಿಸ್ತು. ಬಿಜೆಪಿಯಲ್ಲಿ ಶಿಸ್ತು ಇದ್ದದ್ದು ಯಾವಾಗ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಾರ್ಕೂರು ಮಹಾಸಂಸ್ಥಾನವನ್ನು ಲೋಕಾರ್ಪಣೆ ಮಾಡಲು ಬಂದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಮತ್ತು ತಂಡ ಪಕ್ಷದೊಳಗೆ ಇದ್ದು ಕತ್ತಿ ಮಸಿಯುತ್ತಿದ್ದಾರೆ. ಅಸಮಾಧಾನ ಯಾವಾಗ ಸ್ಪೋಟಗೊಳ್ಳುತ್ತದೆ ಗೊತ್ತಿಲ್ಲ ಎಂದರು.
Advertisement
ಉಡುಪಿ ಟಾರ್ಗೆಟ್ ಕೊಡಲು ಬಿಎಸ್ ಯಡಿಯೂರಪ್ಪ ಯಾರು? ಓಟುಹಾಕುವವರು ರಾಜ್ಯದ ಜನ ಎಂದು ಹೇಳಿ ಟಾಂಗ್ ನೀಡಿದರು.
Advertisement
ಕೆಂಪು ದೀಪ ತೆರವು ಮಾಡಲು ಕೇಂದ್ರ ಆದೇಶ ನೀಡಿದೆ. ಬಿಜೆಪಿ ಅಧಿಕಾರದಲ್ಲಿರುವ ಸಿಎಂಗಳು ಕೆಂಪು ದೀಪ ತೆಗೆದಿದ್ದಾರೆ. ನಾನು ಈ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಹೇಳಿದರು.
Advertisement
ದೇವೇಗೌಡರ ಜೊತೆ ಮಾತ್ರ ಅಲ್ಲ ಬಿಎಸ್‍ವೈ ಸೇರಿದಂತೆ ಎಲ್ಲರ ಮೇಲೆ ಪ್ರೀತಿಯಿದೆ. ಯಾರೂ ಶಾಶ್ವತ ಶತ್ರುಗಳಿಲ್ಲ- ಇತ್ರರೂ ಇಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಹೈಕಮಾಂಡಿಗೆ ಬಿಟ್ಟದ್ದು. ಸಚಿವ ಸಂಪುಟ ವಿಸ್ತರಣೆ, ಮೂರು ಎಂಎಲ್‍ಸಿಗಳ ಬಗ್ಗೆ ಯೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
Advertisement
ನಾನು ದೇವರ ವಿರುದ್ಧ ಅಲ್ಲ – ಧಾರ್ಮಿಕ ಕಾರ್ಯಕ್ರಮಗಳ ವಿರುದ್ಧವೂ ಅಲ್ಲ. ದೇವರನ್ನು ಹುಡುಕಿಕೊಂಡು ಕಾಶ್ಮೀರದವರೆಗೆ ಹೋಗಲ್ಲ. ನಮ್ಮ ಊರಿನ ದೇವರನ್ನು ಆರಾಧಿಸುತ್ತೇನೆ ಎಂದು ಹೇಳಿದರು.
ಸಿಎಂಗೆ ಜಿಲ್ಲಾಡಳಿತ ಕೆಂಪು ದೀಪ ಇಲ್ಲದ ಕಾರನ್ನೇ ಸಿದ್ಧಮಾಡಿತ್ತು. ಅದರಲ್ಲೇ ಹೆಲಿಪ್ಯಾಡಿನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಯಾಣ ಮಾಡಿದರು.