ಬೆಂಗಳೂರು: ಇಂದಿರಾನಗರದ (Indiranagar) ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಪ್ರೇಯಸಿ ಕೊಲೆ ಪ್ರಕರಣದಲ್ಲಿ ರಹಸ್ಯಗಳು ಬಗೆದಷ್ಟೂ ಬಯಲಾಗುತ್ತಿವೆ. ವಿಚಾರಣೆ ವೇಳೆ ಕೊಲೆ ಆರೋಪಿ ಆರವ್ ಹನೋಯ್ ಹಲವು ವಿಚಾರಗಳನ್ನ ಬಾಯ್ಬಿಟ್ಟಿದ್ದಾನೆ. ಅತಿಯಾಗಿ ಫೋನ್‌ನಲ್ಲಿ ಮುಳುಗಿದ್ದೇ ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದಾನಂತೆ.
Advertisement
ಕೊಲೆಗೂ ಮುನ್ನ ಆರವ್ ಹನೋಯ್, ಅಸ್ಸಾಂ ಯುವತಿ ಮಾಯ ಗೊಗಾಯ್‌ಳನ್ನ ಭೇಟಿಯಾಗೋಣ ಅಂತ ಹೊಟೇಲ್‌ಗೆ ಕರೆದಿದ್ದ. ಇಬ್ಬರು ಭೇಟಿಯಾಗಿ 3-4 ದಿನಗಳಾಗಿವೆ ಬಾ ಅಂತಾ ಕರೆದಿದ್ದ. ಕೊನೆಗೆ ತಾನೇ ಹೋಟೆಲ್‌ಗೆ ಕೆರೆದುಕೊಂಡು ಬಂದಿದ್ದ. ಪದೇ ಪದೇ ಫೋನ್ ಕರೆಗಳಲ್ಲಿ ಮುಳುಗಿರುತ್ತಿದ್ದ ಮಾಯಾ, ಹೊಟೇಲ್‌ಗೆ ಬಂದ್ರೂ ಅದರಲ್ಲೇ ಮುಳುಗಿದ್ದಳು. ಇದರಿಂದ ಅವಳಿಗೆ ಫೋನ್ ಮೇಲೆ ಇರೋ ಆಸಕ್ತಿ ನನ್ನ ಮೇಲಿಲ್ಲ ಅಂದುಕೊಂಡಿದ್ದನಂತೆ. ಇದೇ ವಿಚಾರಕ್ಕೆ ಮಾಯಾಳನ್ನ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ನಿರ್ಧರಿಸಿದ್ದ. ಸ್ವರ್ಗದಲ್ಲಿ ಇಬ್ಬರು ಒಂದಾಗೋಣ ಅಂತಾ ನಿಶ್ಚಯಿಸಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ಈ ಬೆನ್ನಲ್ಲೇ ಪೊಲೀಸರು ಆರೋಪಿ ಪೂರ್ವಪರ ವಿಚಾರಿಸಿದ್ದಾರೆ. ಚಿಕ್ಕಂದಿನಲ್ಲೇ ತಂದೆ-ತಾಯಿ ಕಳೆದುಕೊಂಡಿದ್ದ ಆರವ್ ಕೇರಳದ ಕಣ್ಣೂರಿನಲ್ಲಿರುವ ಅಜ್ಜಿ ಮನೆಯಲ್ಲಿ ಬೆಳೆದಿದ್ದ. ಕಳೆದ ಮೇ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದ. ಇದನ್ನೂ ಓದಿ: ಇಂದಿರಾನಗರ ಕೊಲೆ ಕೇಸ್ – ಪ್ರೇಯಸಿಯನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಮನಸ್ಸು ಮಾಡಿದ್ದ ಆರೋಪಿ
Advertisement
ಬಂದ ಹೊಸದರಲ್ಲಿ ಮಾಯಾ ಪರಿಚಯವಾಗಿದ್ದಳು. ಡೇಟಿಂಗ್ ಆಪ್‌ನಲ್ಲಿ ಮಾಯಾ ಪರಿಚಯವಾಗಿದ್ದಳು, ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆರಂಭದಲ್ಲಿ ತನ್ನನ್ನು ಹೆಚ್ಚು ಅಚ್ಚಿಕೊಂಡಿದ್ದ ಮಾಯಾ ಬಳಿಕ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಇದರಿಂದ ರೋಸಿಹೋದ ಆರವ್ ಆಕೆಯನ್ನು ಕೊಲೆ ಮಾಡಲು ಸ್ಕೆಚ್ ಆಗಿದ್ದಾನೆ. ಇದನ್ನೂ ಓದಿ: ಕೂಲ್ ಡ್ರಿಂಕ್ಸ್ ಕುಡಿಯುತ್ತ ಕುಳಿತಿದ್ದ ರೌಡಿಶೀಟರ್ ಮೇಲೆ ಏಕಾಏಕಿ ದಾಳಿ – ಮಾರಕಾಸ್ತ್ರಗಳಿಂದ ಕೊಚ್ಚಿ ಕಗ್ಗೊಲೆ