ಬೆಂಗಳೂರು: ದಿನಕ್ಕೆ ಲಕ್ಷಾಂತರ ಜನರು ಪ್ರಯಾಣ ಮಾಡುವ ಮೆಜೆಸ್ಟಿಕ್‍ನಲ್ಲಿರುವ ಇಂದಿರಾ ಕ್ಲಿನಿಕ್‍ಗೆ ಕಳೆದ ಒಂದು ತಿಂಗಳಿನಿಂದ ಡಾಕ್ಟರ್ ಬಂದಿಲ್ಲ. ಹೆಚ್ಚಾಗಿ ತೃತೀಯ ಲಿಂಗಿಗಳೇ ಕ್ಲಿನಿಕ್‍ಗೆ ಬರುತ್ತಾರೆ ಎಂದು ವೈದ್ಯರು ನೇಮಕವಾಗಲು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟಿನ್ ಯಶಸ್ವಿಯಾದ ಬೆನ್ನಲ್ಲೆ ಕಳೆದ ಬಾರಿ ಇದ್ದ ಸರ್ಕಾರ ಬಿಎಂಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಮೆಜೆಸ್ಟಿಕ್ ಮತ್ತು ಯಶವಂತಪುರ ಟಿಟಿಎಂಸಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭ ಮಾಡಿತ್ತು. ಕೆಲವು ದಿನಗಳು ಚೆನ್ನಾಗಿ ನಡೆಯುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ. ಇದ್ದ ವೈದ್ಯರು ಕ್ಲಿನಿಕ್ ಬಿಟ್ಟು ಒಂದು ತಿಂಗಳಾದರೂ ಇನ್ನೂ ಬೇರೆ ಡಾಕ್ಟರ್ ನೇಮಕ ಮಾಡಿಲ್ಲ.
Advertisement
Advertisement
ಬೇರೆ ಡಾಕ್ಟರ್ ನಾ ನೇಮಕ ಮಾಡೋಣ ಅಂದರೆ ಯಾವ ಡಾಕ್ಟರ್ ಕೂಡ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ಗೆ ಬರಲು ಮುಂದಾಗುತ್ತಿಲ್ಲ. ಮಹಿಳಾ ವೈದ್ಯರು, ನಾವು ಹೋಗಲ್ಲ, ಜಾಗ ಸರಿ ಇಲ್ಲ ಮತ್ತು ತೃತೀಯ ಲಿಂಗಿಗಳು ಜಾಸ್ತಿ ಬರುತ್ತಾರೆ ಆಗಾಗಿ ನಾವು ಹೋಗಲ್ಲ ಎಂದು ಹೇಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
Advertisement
ನಮ್ಮ ಪಬ್ಲಿಕ್ ಟಿವಿ, ವೈದ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ
ಪ್ರತಿನಿಧಿ : ಯಾಕ್ ಸರ್ ಮೆಜೆಸ್ಟಿಕ್‍ನಲ್ಲಿ ಡಾಕ್ಟರ್ ಇಲ್ಲ. ಮೆಜೆಸ್ಟಿಕ್ ಅಂದರೆ ಯಾರು ಬರಲ್ಲ ಅಂತಾ ಇದಾರಂತೆ ಯಾಕೆ?
ವೈದ್ಯಾಧಿಕಾರಿ : ಇಲ್ಲ ಸರ್ ಮೆಜೆಸ್ಟಿಕ್ ಅಂದರೆ ಲೇಡಿಸ್ ಹಾಕೋಕೆ ಆಗಲ್ಲ. ಅಲ್ಲಿ ವರ್ಕರ್ಸ್ ಜಾಸ್ತಿ
ಪ್ರತಿನಿಧಿ : ಹುಂ ಹುಂ .
ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಸರ್ ಆಗಾಗಿ ಬರುತ್ತಿಲ್ಲ.
ಪ್ರತಿನಿಧಿ : ಹೌದಾ…
ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಇದಾರೆ ಸರ್
ಪ್ರತಿನಿಧಿ : ಆದರೆ ಏನು..
ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಹೆಚ್ಚಾಗಿ ಬರುವುದು ಸರ್.. ಅವರಿಗೆ ಲೇಡಿಸ್ ಟ್ರೀಟ್ ಮೆಂಟ್ ಕೊಡೋಕೆ ಆಗಲ್ಲ ಸರ್
ಪ್ರತಿನಿಧಿ : ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರಾ
ವೈದ್ಯಾಧಿಕಾರಿ : ಹೌದು.. ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರು, ಬರಲ್ಲ ಅಂತಾ ಅಂದ್ರು
ಪ್ರತಿನಿಧಿ : ಮತ್ತೆ ಹೇಗೆ ಈಗ
ವೈದ್ಯಾಧಿಕಾರಿ : ಈಗ ಜೆಂಟ್ಸ್ ಡಾಕ್ಟರ್ ಬರುತ್ತಾರೆ, ಸೋಮವಾರ
Advertisement
ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರ್ ಇಲ್ಲದೇ ನರ್ಸ್‌ಗಳು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ. ವೈದ್ಯರಿಲ್ಲದೇ ನರ್ಸ್‌ಗಳ ಬಳಿ ಟ್ರೀಟ್ ಮೆಂಟ್ ತೆಗೆದುಕೊಳ್ಳುವುದಕ್ಕೆ ರೋಗಿಗಳು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯಾಕೆ ಒಂದು ತಿಂಗಳಿನಿಂದ ಡಾಕ್ಟರ್ ಇಲ್ಲ ಎಂದು ನರ್ಸ್ ಕೇಳಿದರೆ ಏನು ಉತ್ತರ ಕೊಟ್ಟಿದ್ದಾರೆ ಎಂದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ…
ಪ್ರತಿನಿಧಿ : ಮೆಜೆಸ್ಟಿಕ್ ಆದರೆ ಏನಂತೆ ಮೇಡಂ ಬರೋದಕ್ಕೆ
ಇಂದಿರಾ ಕ್ಲಿನಿಕ್ ನರ್ಸ್ : ಮೆಜೆಸ್ಟಿಕ್ ಏರಿಯಾ ಸರಿ ಇಲ್ಲ ಅಂತಾ ಸರ್
ಪ್ರತಿನಿಧಿ : ಇವರು ಯಾಕ್ ಬಿಟ್ಟಿದ್ದು
ಇಂದಿರಾ ಕ್ಲಿನಿಕ್ ನರ್ಸ್ : ಎಂಡಿ ಮಾಡೋದಕ್ಕೆ ಹೋಗಿದ್ದಾರೆ
ಪ್ರತಿನಿಧಿ : ಏನು ಹೇಳ್ತಾರೆ ಮೇಲಿನವರು ಯಾವಾಗ ಬರುತ್ತಾರಂತೆ
ಇಂದಿರಾ ಕ್ಲಿನಿಕ್ ನರ್ಸ್ : ಗೊತ್ತಿಲ್ಲ ಸರ್ ಮೆಜೆಸ್ಟಿಕ್ ಸರಿ ಇಲ್ಲ ಯಾರು ಬರುತ್ತಿಲ್ಲ ಅಂತಾ ಹೇಳುತ್ತಿದ್ದಾರೆ ಸರ್
ಪ್ರತಿನಿಧಿ : ಎರಡು ತಿಂಗಳಿನಿಂದ ಡಾಕ್ಟರ್ ಇಲ್ಲ
ಇಂದಿರಾ ಕ್ಲಿನಿಕ್ ನರ್ಸ್ : ಒಂದು ತಿಂಗಳಿನಿಂದ ಇಲ್ಲ ಸರ್
ಪ್ರತಿನಿಧಿ : ಯಾವಾಗ ಬರಬಹುದು ?
ನರ್ಸ್ : ಬರುತ್ತಾರೆ ಸರ್ ಇನ್ನೊಂದು ವಾರದಲ್ಲಿ ಬರ್ತಾರೆ ಅಂತಾ ಆಫೀಸರ್ಸ್ ಹೇಳುತ್ತಿದ್ದಾರೆ ಸರ್.