ಬೆಂಗಳೂರು: ಹಳೇ ಇಂದಿರಾ ಕ್ಯಾಂಟೀನ್‍ಗೆ ಹೊಸ ರೂಪ ಕೊಟ್ಟು ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಿಸಲು ತೀರ್ಮಾನ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 250 ಕ್ಯಾಂಟಿನ್ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್ ಗಳಲ್ಲಿನ ಮೆನು ಬದಲಾವಣೆ ಮಾಡುವ ಮೂಲಕ ಹೊಸದಾಗಿ ಟೆಂಡರ್ ಕರೆಯಲು ಸರ್ಕಾರ ತೀರ್ಮಾನ ಮಾಡಿದೆ ಎಂದರು.
Advertisement
Advertisement
ಹಳೇ ದರದಲ್ಲೇ ಇಂದಿರಾ ಕ್ಯಾಂಟೀನ್ ಊಟ ಸಿಗಲಿದೆ. ಟೆಂಡರ್ ಪ್ರಕ್ರಿಯೆ ಆದ ಕೂಡಲೇ ರೀ ಲಾಂಚ್ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯದ ಮೇಲೆ ಒಲವಿಲ್ಲ, ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣ ಮಾಡುತ್ತಿದ್ದೇನೆ: ಎಚ್‌ಡಿಕೆ
Advertisement
ಕಳೆದ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ (Indira Canteen) ಪ್ರಾರಂಭ ಮಾಡಲಾಗಿತ್ತು. ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುತ್ತಿದ್ದರಿಂದ ಬಡವರಿಗೆ ಭಾರೀ ಅನುಕೂಲವಾಗಿತ್ತು. ಆದರೆ ಬಿಜೆಪಿ ಸರ್ಕಾರ ಇದರ ಕಡೆ ಹೆಚ್ಚು ಗಮನ ಕೊಡದೇ ಇದ್ದ ಕಾರಣ ಅನೇಕ ಕಡೆಗಳಲ್ಲಿ ಮುಚ್ಚಿದ್ದವು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ಇಂದಿರಾ ಕ್ಯಾಂಟೀನ್‍ಗಳಿಗೆ ಬಲ ಸಿಕ್ಕಿದೆ.