– ಸುಪ್ರೀಂ ಆದೇಶ ಮೀರಿದ ಪದ್ಮಾವತಿ ಆಡಳಿತ
ಬೆಂಗಳೂರು: ಆಗಸ್ಟ್ 15ಕ್ಕೆ ಇಂದಿರಾ ಕ್ಯಾಂಟೀನ್ ಲಾಂಚ್ ಮಾಡ್ಬೇಕು. ಸಮಯ ಬೇರೆ ಕಡಿಮೆಯಿದ್ದು, ಜಾಗನೂ ಸಿಕ್ತಿಲ್ಲ. ಹೀಗಾಗಿ ನಗರದ ಸಿಕ್ಕಸಿಕ್ಕ ಜಾಗದಲ್ಲೆಲ್ಲಾ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಮಾಡೋಕೆ ಹೊರಟಿದೆ. ಇದೀಗ ಈ ಇಂದಿರಾ ಕ್ಯಾಂಟೀನ್‍ಗೆ ಪಾರ್ಕ್‍ವೊಂದು ಬಲಿಯಾಗಿದೆ.
Advertisement
ಇಂದಿರಾ ಕ್ಯಾಂಟಿನ್ ಗಾಗಿ ನಗರದ ಕುರುಬರ ಹಳ್ಳಿಯ ಸಿದ್ಧಾರೂಢ ಪಾರ್ಕನ್ನು ಅರ್ಧ ಕತ್ತರಿಸಿ ತೆಗೆದಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಪಾರ್ಕ್ ಇತ್ತು ಅನ್ನೋದು ಗುರುತು ಸಿಗದ ಹಾಗೆ ಆ ಜಾಗವನ್ನ ಕಿತ್ತೊಗೆದಿದ್ದಾರೆ. ಕ್ಯಾಂಟೀನ್ ಮಾಡೋದಕ್ಕೆ ನಮ್ಮ ಅಭ್ಯಂತರವಿಲ್ಲ, ಆದ್ರೆ ಪಾರ್ಕ್ ಜಾಗವನ್ನು ಬಳಸೋಕೆ ನಾವು ಅವಕಾಶ ಕೊಡಲ್ಲ ಎಂದು ಬಿಜೆಪಿ ನಾಯಕರು ಅಂತಿದ್ದಾರೆ.
Advertisement
Advertisement
ಪಾರ್ಕ್ ಹಾಗೂ ಮೈದಾನದ ಜಾಗವನ್ನು ಕ್ಯಾಂಟೀನ್‍ಗೆ ಬಳಸಲ್ಲ ಅಂತ ಬಿಬಿಎಂಪಿ ಹೇಳ್ತಿದೆ. ಇಲ್ಲಿ ನೋಡಿದ್ರೆ ಕ್ಯಾಂಟೀನ್‍ಗಾಗಿ ಪಾರ್ಕ್ ಧ್ವಂಸಗೊಳಸಿದ್ದಾರೆ. ಆಟದ ಮೈದಾನ ಹಾಗೂ ಪಾರ್ಕ್‍ಗಳಲ್ಲಿ ಯಾವುದೇ ಈ ರೀತಿಯ ಚಟುವಟಿಕೆಗಳನ್ನು ನಡೆಸೋದಕ್ಕೆ ಅವಕಾಶವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
Advertisement