ಭೋಪಾಲ್: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಯೊಬ್ಬರು ಇಂಗ್ಲಿಷ್ ಶಬ್ದವನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲಕಾಲ ಭಯದ ವಾತಾವರಣ ನಿರ್ಮಾಣವಾದ ಘಟನೆ ಭೋಪಾಲ್‌ನ ರಾಜಾ ಭೋಜ್‌ನಲ್ಲಿ ನಡೆದಿದೆ.
ಮಹಿಳಾ ಸಿಬ್ಬಂದಿ ಬ್ಯಾಲಸ್ಟ್ (ನಿಲುಭಾರ, ವಾಹನ ಅಥವಾ ರಚನೆಗೆ ಸ್ಥಿರತೆ ಒದಗಿಸಲು ಬಳಸುವ ವಸ್ತು) ಎಂಬ ಪದವನ್ನು ಬ್ಲಾಸ್ಟ್ ಎಂದು ತಪ್ಪಾಗಿ ಕೇಳಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ(Airport) ಬೆದರಿಕೆ ಇದೆ ಎಂದು ಅಲ್ಲಿನ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ.
ಟಿಕೆಟ್ ಕೌಂಟರ್‌ಗೆ ವಿಮಾನದ ಮೂಲಕ ಬ್ಯಾಲಸ್ಟ್‌ನ್ನು ತಲುಪಿಸುವ ಬಗ್ಗೆ ಕರೆ ಬಂದಿತ್ತು. ಈ ಬಗ್ಗೆ ಇಂಡಿಗೋ ಸಿಬ್ಬಂದಿಯು ಬ್ಯಾಲಸ್ಟ್‌ನ್ನು ಬ್ಲಾಸ್ಟ್ ಎಂದು ತಪ್ಪಾಗಿ ಅಥೈಸಿಕೊಂಡಿದ್ದಾರೆ. ಇದಾದ ಬಳಿಕ ಆ ಸಿಬ್ಬಂದಿ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಗೆ(ಬಿಎಟಿಸಿ) ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರೆಯನ್ನು ಪರಿಶೀಲಿಸಿದ ಬಿಎಟಿಸಿ ಬ್ಯಾಲೆಸ್ಟ್‌ನ್ನು ಬ್ಲಾಸ್ಟ್ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 7 ಮಂದಿ ಸಾವು
ಈ ಬಗ್ಗೆ ವಿಮಾನ ನಿಲ್ದಾಣ ನಿರ್ದೇಶಕ ಅಮೃತ್ ಮಿಂಜ್ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಕೆಲಕಾಲ ತುರ್ತು ಪರಿಸ್ಥಿತಿ ಉಂಟಾಗಿತ್ತು. ಆದರೆ ಬ್ಯಾಲಸ್ಟ್ ಪದವನ್ನು ತಪ್ಪಾಗಿ ಅಥೈಸಿಕೊಂಡಿದ್ದರು. ಇದರಿಂದಾಗಿ ಈ ರೀತಿ ಅಚಾತುರ್ಯ ಉಂಟಾಗಿದೆ. ಈ ರೀತಿಯ ಅಚಾತುರ್ಯಕ್ಕೆ ಹಾಗೂ ಜನರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿದ್ದಕ್ಕೆ ಕ್ಷಮೆಯಾಚಿಸಿದರು. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ – ಪ್ರಕರಣ ದಾಖಲು