– ವಿಮಾನಗಳ ಹಾರಾಟದಲ್ಲಿ ಸುಧಾರಣೆ
ನವದೆಹಲಿ: ಇಂಡಿಗೋ (IndiGo) 610 ಕೋಟಿ ರೂ. ಮೌಲ್ಯದ ಟಿಕೆಟ್‌ಗಳ ಹಣವನ್ನು ಮರುಪಾವತಿಸಿದೆ. ಸರಿಯಾದ ಸಮಯಕ್ಕೆ ವಿಮಾನ ಹಾರಾಟದ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿದೆ.
ಇಂಡಿಗೋ 1,650 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುವ ಹಾದಿಯಲ್ಲಿದೆ. ನಿನ್ನೆ 1,500 ವಿಮಾನಗಳು ಕಾರ್ಯನಿರ್ವಹಿಸಿದ್ದವು ಎಂದು ವಿಮಾನಯಾನ ಸಂಸ್ಥೆ ಇಂದು ಸಂಜೆ ಬಿಡುಗಡೆ ಮಾಡಿದ ಸ್ಟೇಟಸ್ ಅಪ್‌ಡೇಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ಗೆ ಶೋಕಾಸ್ ನೋಟಿಸ್ ಜಾರಿ; 24 ಗಂಟೆಯಲ್ಲಿ ಉತ್ತರಿಸುವಂತೆ ಸೂಚನೆ

ಡಿ.15 ರವರೆಗೆ ಬುಕಿಂಗ್‌ಗಳಿಗಾಗಿ ರದ್ದತಿ ಮತ್ತು ಮರುಹೊಂದಿಸುವ ವಿನಂತಿಗಳಿಗೆ ಸಂಪೂರ್ಣ ವಿನಾಯಿತಿ ನೀಡುವುದಾಗಿ ವಿಮಾನಯಾನ ಸಂಸ್ಥೆ ಪುನರುಚ್ಚರಿಸಿದೆ. ಮರುಪಾವತಿ ಮತ್ತು ಲಗೇಜ್ ವಿಂಗಡಿಸುವ ಪ್ರಕ್ರಿಯೆಯು ವೇಗವಾಗಿ ನಡೆಯುತ್ತಿದೆ ಎಂದುಹೇಳಿದೆ.
ನಾವು ವಿಮಾನ ಸೇವೆಯನ್ನು ಸಹಜ ಸ್ಥಿತಿಗೆ ತರಲು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ದಯವಿಟ್ಟು ನಮ್ಮೊಂದಿಗೆ ಸಹಕರಿಸಿ ಎಂದು ಇಂಡಿಗೋ ತಿಳಿಸಿದೆ. ಇದನ್ನೂ ಓದಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ; ಇತರೆ ಏರ್‌ಲೈನ್‌ಗಳಿಂದ ದರ ಹೆಚ್ಚಳ – ಕೇಂದ್ರ ಮಧ್ಯಪ್ರವೇಶ
ಇಂಡಿಗೋ ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಉಂಟಾದ ಅಡಚಣೆಯನ್ನು ಪರಿಹರಿಸಲು ಮತ್ತು ಪ್ರಯಾಣಿಕರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ (MoCA) ತ್ವರಿತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

