ಮುಂಬೈ: ಲಕ್ನೋಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಪ್ಯಾಸೆಂಜರ್ ವಿಮಾನವೊಂದು ಸೋಮವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
54 ಪ್ರಯಾಣಿಕರಿದ್ದ ವಿಮಾನ(6ಇ 7074) ಸೋಮವಾರ ಬೆಳಗ್ಗೆ 7:45 ರ ಸುಮಾರಿಗೆ ಗುಜರಾತ್‌ನ ಅಹಮದಾಬಾದ್‌ನಿಂದ ಹಾರಾಟ ಪ್ರಾರಂಭಿಸಿತ್ತು. 8:33 ರ ಹೊತ್ತಿಗೆ ವಿಮಾನದಿಂದ ಹೊಗೆ ಹೊರ ಹೊಮ್ಮುವುದನ್ನು ಪೈಲಟ್ ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರ ದಾಳಿ: ಸಿಆರ್‌ಎಫ್ ಸಿಬ್ಬಂದಿ ಹುತಾತ್ಮ
Advertisement
Advertisement
ಫೆಬ್ರವರಿ 2022 ರಲ್ಲಿ, ಚೆನ್ನೈಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಅಧಿಕೃತ ಬಾಕ್ಸ್ ಆಫೀಸ್ ರಿಪೋರ್ಟ್ : 331 ಕೋಟಿ ಬಾಚಿದ ಸಿನಿಮಾ
Advertisement