ನವದೆಹಲಿ: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಇಂಡಿಗೋ ವಿಮಾನ (IndiGo Flight) ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ತುರ್ತು ಭೂಸ್ಪರ್ಶ (Emergency Landing) ಮಾಡಿದೆ.
ಬೋಯಿಂಗ್ 737 ವಿಮಾನ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆ ಬೆಳಗ್ಗೆ 10:50ಕ್ಕೆ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಎಮರ್ಜೆನ್ಸಿ ಲ್ಯಾಂಡಿಂಗ್ ಹಿನ್ನೆಲೆ ರನ್ ವೇ 28ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದನ್ನೂ ಓದಿ: ಮೋದಿ ಇಸ್ರೇಲ್‌ಗೆ ಹೋಗಿಬಂದ ಮರುದಿನವೇ ಯುದ್ಧ ಶುರುವಾಯ್ತು: ಎಂ.ಬಿ ಪಾಟೀಲ್
ವಿಮಾನದಲ್ಲಿ 161 ಪ್ರಯಾಣಿಕರಿದ್ದರು. ಸದ್ಯ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಟರ್ಕಿಯ ಕೊರೆಂಡನ್ ಏರ್‌ಲೈನ್ಸ್‌ಗೆ (Corendon Airlines) ಸೇರಿದ ಈ ವಿಮಾನವನ್ನು ಇಂಡಿಗೋ ಸಂಸ್ಥೆ ಲೀಸ್‌ಗೆ ಪಡೆದಿದೆ. ಇದನ್ನೂ ಓದಿ: ಒಂದು ಬಾಟಲ್ ಕೊಟ್ಟರೆ ಕೆಳಗೆ ಬರ್ತಿನಿ – ಟವರ್ ಹತ್ತಿ ಕುಡುಕನ ಹುಚ್ಚಾಟ

