ಕೋಲ್ಕತ್ತಾ: ಬೆಂಗಳೂರಿಗೆ (Bengaluru) ಹೊರಟಿದ್ದ ಇಂಡಿಗೋ (IndiGo) ವಿಮಾನದ ಎಂಜಿನ್ ವಿಫಲವಾದ ಕಾರಣ ಕೋಲ್ಕತ್ತಾದಲ್ಲಿ (Kolkata) ತುರ್ತು ಭೂಸ್ಪರ್ಶ ಮಾಡಿದೆ.
ಕೋಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಎರಡೂ ರನ್‌ವೇಗಳನ್ನು ನಂತರ ತೆರವುಗೊಳಿಸಲಾಯಿತು. ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿತು. ಇದನ್ನೂ ಓದಿ: ಕೇದಾರನಾಥ| ಏರ್‌ಲಿಫ್ಟ್ ವೇಳೆ ಹೆಲಿಕಾಪ್ಟರ್ ಪತನ – ಅಧಿಕಾರಿಗಳು ಹೇಳಿದ್ದೇನು?
Advertisement
Advertisement
ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಇಂಜಿನ್ ಆಗಸದಲ್ಲೇ ವಿಫಲಗೊಂಡಿತು. ಪರಿಣಾಮವಾಗಿ ಕೋಲ್ಕತ್ತಾ ಏರ್‌ಪೋರ್ಟ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿತು.
Advertisement
Advertisement
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. 173 ಮಂದಿ ವಿಮಾನದಲ್ಲಿದ್ದರು. ಇದನ್ನೂ ಓದಿ: ಬಿರುಗಾಳಿಗೆ ವಾಲಿದ ವಿಮಾನ, ಲ್ಯಾಂಡಿಂಗ್ ಆಗದೇ ಮತ್ತೆ ಟೇಕಾಫ್ – ವೈರಲ್ ವಿಡಿಯೋ