ಇಂಡಿಗೋ ವಿಮಾನದ ವಾಶ್‍ರೂಮ್‍ನಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ – ತುರ್ತು ಭೂಸ್ಪರ್ಶ

Public TV
1 Min Read
INDIGO

ಭೊಪಾಲ್: ಮಧ್ಯಪ್ರದೇಶದ ಜಬಲ್‍ಪುರದಿಂದ ತೆಲಂಗಾಣದ ಹೈದರಾಬಾದ್‍ಗೆ (Hyderabad) ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ (IndiGo Flight) ಬಾಂಬ್ ಬೆದರಿಕೆ ಹಾಕಲಾಗಿದ್ದು, ನಾಗ್ಪುರದಲ್ಲಿ (Nagpur) ತುರ್ತು ಭೂಸ್ಪರ್ಶ ಮಾಡಲಾಗಿದೆ.

ಇಂಡಿಗೋ ವಿಮಾನ ಸಂಸ್ಥೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, 6ಇ-7308 ವಿಮಾನ ಜಬಲ್‍ಪುರದಿಂದ ಹೈದರಾಬಾದ್‍ಗೆ ತೆರಳುತ್ತಿತ್ತು. ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಸಿಕ್ಕಿದ್ದು, ನಾಗ್ಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ತಿಳಿಸಿದೆ.

ಬಾಂಬ್ ಬೆದರಿಕೆ ಸಂದೇಶವನ್ನು ಕಾಗದದಲ್ಲಿ ಬರೆದು ವಿಮಾನದ ಶೌಚಾಲಯದಲ್ಲಿ ಇಡಲಾಗಿತ್ತು. ತುರ್ತು ಭೂಸ್ಪರ್ಶದ ಬಳಿಕ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ಪರಿಶೀಲನೆಯ ನಂತರ ಅನುಮಾನಾಸ್ಪದ ವಸ್ತುಗಳು ಏನೂ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪರಿಶೀಲನೆ ಮುಗಿದಿದ್ದು, ವಿಮಾನ ಹೈದರಾಬಾದ್‍ಗೆ ತೆರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article