ನವದೆಹಲಿ: 168 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಇಂಡಿಗೋ (IndiGo Flight) ವಿಮಾನ ಹಾರಾಟದ ಸಮಯದಲ್ಲೇ ‘ಮೇಡೇ’ ಘೋಷಿಸಿದೆ. ಅದೃಷ್ಟವಶಾತ್ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
168 ಪ್ರಯಾಣಿಕರಿದ್ದ ಇಂಡಿಗೋದ ಗುವಾಹಟಿ-ಚೆನ್ನೈ ವಿಮಾನವು ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್‌ನಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ಪೈಲಟ್‌ಗಳು ‘ಮೇಡೇ’ ಘೋಷಿಸಿದ ಕೆಲ ಹೊತ್ತಲ್ಲೇ ಈ ದುರಂತ ಸಂಭವಿಸಿತ್ತು. ಇದನ್ನೂ ಓದಿ: ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್ ಕೊಟ್ಟ ಕೊನೆಯ ಸಂದೇಶ
ಗುರುವಾರ ಈ ಘಟನೆ ನಡೆದಿದೆ. ಇಂಧನವು ತೀರಾ ಕಡಿಮೆ ಇದ್ದ ಇಂಡಿಗೋ ವಿಮಾನವು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಪತ್ತಿನ ಕರೆ ಬಂದ ನಂತರ, ಎಟಿಸಿ (ವಾಯು ಸಂಚಾರ ನಿಯಂತ್ರಣ) ಸಿಬ್ಬಂದಿಗೆ ಮಾಹಿತಿ ನೀಡಿತು. ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು. ವಿಮಾನವು ರಾತ್ರಿ 8:20 ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇದನ್ನೂ ಓದಿ: Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?
ಮಧುರೈಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಆಕಾಶದಲ್ಲೇ ತಾಂತ್ರಿಕ ದೋಷವನ್ನು ಅನುಭವಿಸಿತು. ಸುಮಾರು 168 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಕೆಳಗಿಳಿಸಲಾಯಿತು.