ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಂಡಿಗೋ (IndiGo) ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ಇಂಡಿಗೋ ಸಂಸ್ಥೆಗೆ ಬರೋಬ್ಬರಿ 22.20 ಕೋಟಿ ರೂ. ದಂಡ ವಿಧಿಸಿದೆ.
ಕಳೆದ ವರ್ಷದ ಡಿಸೆಂಬರ್ 3 ರಿಂದ 5 ರ ವರೆಗೆ ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. 2,507 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು, ಜೊತೆಗೆ 1,852 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ಇದರಿಂದ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿ, ಪರದಾಡಿದ್ದರು. ಇದನ್ನೂ ಓದಿ: ಇಂಡಿಗೋ ಸಮಸ್ಯೆ – ವಿಮಾನಯಾನ ಸುರಕ್ಷತೆಯ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿದ್ದ ನಾಲ್ವರು ಅಧಿಕಾರಿಗಳು ಅಮಾನತು

ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶನದ ಮೇರೆಗೆ ಡಿಜಿಸಿಎ ನೇಮಿಸಿದ್ದ ನಾಲ್ವರು ಸದಸ್ಯರ ಸಮಿತಿ ನೀಡಿದ ಶಿಫಾರಸುಗಳನ್ನ ಆಧರಿಸಿ ಶುಲ್ಕ ವಿಧಿಸುವ ಕ್ರಮ ಜರುಗಿಸಲಾಗಿದೆ. ಇದನ್ನೂ ಓದಿ: ಇಂಡಿಗೋ ಸಮಸ್ಯೆ ಇದ್ದಾಗಲೂ ಟಿಕೆಟ್ ದರ 39 ಸಾವಿರಕ್ಕೆ ಏರಿದ್ದು ಹೇಗೆ – ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ
ಇಂಡಿಗೋ ವಿಮಾನಗಳ ಕಾರ್ಯಾಚರಣೆ ವ್ಯತ್ಯಯಕ್ಕೆ ಕಾರಣವಾದ ಅಂಶಗಳ ಮೌಲ್ಯಮಾಪನವನ್ನು ಈ ಸಮಿತಿ ಮಾಡಿತ್ತು. ತನಿಖೆಯಲ್ಲಿ ಇಂಡಿಗೋ ಆಡಳಿತ ಮಂಡಳಿಯ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣ ವೈಫಲ್ಯಗಳು ಪತ್ತೆಯಾಗಿದ್ದವು. ಇದರ ಆಧಾರದ ಮೇಲೆ ಡಿಜಿಸಿಎ ಕಠಿಣ ಕ್ರಮ ಜರುಗಿಸಿದೆ.

