ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿ – ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ

Public TV
1 Min Read
IndiGo Flight Damege

-‌ ಅಪಾಯದ ಅಂಚಿನಿಂದ ಪಾರಾದ‌ ವಿಮಾನ
– ಭಯಭೀತರಾಗಿ ಕಿರುಚಾಡಿದ ಪ್ರಯಾಣಿಕರು

ನವದೆಹಲಿ: ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿಯಾದ ಪರಿಣಾಮ ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ (IndiGo) ವಿಮಾನದಲ್ಲಿ ಎಮರ್ಜೆನ್ಸಿ ಘೋಷಿಸಲಾಯಿತು. ಕಡೆಗೆ ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಯಿತು.

ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಮಂಗಳವಾರ ಸಂಜೆ ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆಯನ್ನು ಅನುಭವಿಸಿತು. ಇದರಿಂದಾಗಿ ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ) ದೊಂದಿಗೆ ತುರ್ತು ಪರಿಸ್ಥಿತಿ ಘೋಷಿಸಿದರು. ಇದನ್ನೂ ಓದಿ: ಐಎಎಸ್ ಹುದ್ದೆಗೆ ನಕಲಿ ಪ್ರಮಾಣಪತ್ರ: ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು

ಎಟಿಸಿಗೆ ಪೈಲಟ್‌ ಎರ್ಮೆಜೆನ್ಸಿ ಘೋಷಿಸಿದರು. ಮಳೆ ಮತ್ತು ಆಲಿಕಲ್ಲು ರಭಸದಿಂದ ವಿಮಾನ ಅಲುಗಾಡಿತು. ವಿಮಾನ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಆಘಾತಗೊಂಡರು. ಭಯಭೀತಿರಾದ ಪ್ರಯಾಣಿಕರಿಂದ ಕಿರುಚಾಡಿದರು.

6E2142 ವಿಮಾನವು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್‌ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗು: ಪಾಕ್‌ ಅಧಿಕಾರಿ ಮುಂದೆ ಆಸೆ ವ್ಯಕ್ತಪಡಿಸಿದ್ದ ಜ್ಯೋತಿ

ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ‌ ಸೇಫ್ ಆಗಿದ್ದಾರೆ. ಪೈಲಟ್‌ಗಳ‌ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ (Nose damage) ಭಾರೀ ಪ್ರಮಾಣದಲ್ಲಿ‌ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ.

Share This Article