ನವದೆಹಲಿ: ಎಂಜಿನ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆ ತನ್ನ 47 ವಿಮಾನಗಳ ಹಾರಾಟವನ್ನು ರದ್ದು ಪಡಿಸಿದೆ.
ಕಳೆದ ಒಂದು ತಿಂಗಳಿನಲ್ಲಿ ಅಮೆರಿಕದ ಪ್ರ್ಯಾಟ್ ಮತ್ತು ವಿಟ್ನೆ ಕಂಪನಿಯ ಎಂಜಿನ್‍ಗಳನ್ನು ಹೊಂದಿದ್ದ ಮೂರು ವಿಮಾನಗಳು ವೈಫಲ್ಯಗೊಂಡ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಈ ಎಂಜಿನ್ ಗಳನ್ನು ಅಳವಡಿಸಿಕೊಂಡಿದ್ದ ಇಂಡಿಗೋ ಮತ್ತು ಗೋಏರ್ ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ.
Advertisement
ಈ ಆದೇಶದ ಅನ್ವಯ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಪಾಟ್ನಾ, ಶ್ರೀನಗರ, ಭುವನೇಶ್ವರ್, ಅಮೃತಸರ್, ಗುವಾಹಟಿ ಸೇರಿದಂತೆ ಕೆಲ ಪ್ರದೇಶಗಳಿಗೆ ಸಂಚರಿಸುತ್ತಿದ್ದ ವಿಮಾನಗಳ ಹಾರಾಟ ರದ್ದಾಗಿದೆ.
Advertisement
ಸೋಮವಾರ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹಾರಾಟ ಆರಂಭಿಸಿ ಎಂಜಿನ್ ವೈಫಲ್ಯದಿಂದ ತುರ್ತು ಲ್ಯಾಂಡಿಂಗ್ ಆಗಿತ್ತು.
Advertisement
ಪ್ರತಿದಿನ ಇಂಡಿಗೋ ಕಂಪೆನಿಯ 1 ಸಾವಿರಕ್ಕೂ ಅಧಿಕ ವಿಮಾನಗಳು ದೇಶದಲ್ಲಿ ಹಾರಾಟ ನಡೆಸುತ್ತಿದೆ. ಕಡಿಮೆ ಬೆಲೆ ಟಿಕೆಟ್ ನಿಗದಿಪಡಿಸಿದ ಕಾರಣ ದೇಶದ 40% ಪ್ರಯಾಣಿಕರು ಇಂಡಿಗೋ ಸೇವೆಯನ್ನು ಬಳಸುತ್ತಿದ್ದಾರೆ. ಗೋಏರ್ ಕಂಪೆನಿಗೆ ದೇಶದಲ್ಲಿ 10% ಮಾರುಕಟ್ಟೆ ಇದೆ.
Advertisement
ಫೆ.24 ರಂದು ಲೆಹ್ ನಲ್ಲಿ ಗೋಏರ್ ವಿಮಾನದಲ್ಲಿ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಮಾರ್ಚ್ 5 ರಂದು ಮುಂಬೈ ನಲ್ಲಿ ಎಂಜಿನ್ ನಲ್ಲಿ ಇಂಡಿಗೋದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಟೇಕಾಫ್ ಆಗಿರಲಿಲ್ಲ.