ನವದೆಹಲಿ: ಏಷ್ಯಾ ಪೆಸಿಫಿಕ್ ವಲಯದಲ್ಲಿ ಮೊದಲ ಬಾರಿಗೆ ಇಂಡಿಗೋ ಸ್ವದೇಶಿ ನ್ಯಾವಿಗೇಷನ್ ಸಿಸ್ಟಮ್ ‘ಗಗನ್’ ಅನ್ನು ಬಳಸಿಕೊಂಡು ವಿಮಾನವನ್ನು ಲ್ಯಾಂಡ್ ಮಾಡಿದೆ.
ಎಟಿಆರ್-72 ವಿಮಾನ ಜಿಯೋ ಆಗ್ಮೆಂಟೆಡ್ ನ್ಯಾವಿಗೇಷನ್(ಗಗನ್) ಜಿಪಿಎಸ್ ಬಳಸಿಕೊಂಡು ಬುಧವಾರ ರಾಜಸ್ಥಾನದ ಕಿಶನ್‌ಗಢ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು.
Advertisement
ಗಗನ್ ಅನ್ನು ಸೆಂಟರ್-ರನ್ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ವಿದ್ಯುತ್ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು
Advertisement
Advertisement
ವಿಮಾನ ಲ್ಯಾಂಡಿಂಗ್ ಮಾಡಲು ರನ್‌ವೇ ಸಮೀಪಿಸುವ ಸಂದರ್ಭದಲ್ಲಿ ಪಾರ್ಶ್ವ ಹಾಗೂ ಲಂಬ ಮಾರ್ಗದರ್ಶನವನ್ನು ಇದು ನೀಡುತ್ತದೆ. ಕೆಲವು ಸಣ್ಣ ವಿಮಾನ ನಿಲ್ದಾಣಗಳಲ್ಲಿ ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್(ಐಎಲ್‌ಎಸ್) ಇಲ್ಲದೇ ಇರುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ.
Advertisement
ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ ಗಗನ್ ವಾಯುಪ್ರದೇಶವನ್ನು ಆಧುನೀಕರಿಸುತ್ತದೆ. ವಿಮಾನ ಸಂಚಾರದಲ್ಲಿ ವಿಳಂಬವಾಗುವುದನ್ನು ಕಡಿಮೆ ಮಾಡುತ್ತದೆ ಹಾಗೂ ಇಂಧನ ಉಳಿತಾಯ, ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ
ಭಿನ್ನ ಹೇಗೆ?
ಗಗನ್ ಸ್ಯಾಟಲೈಟ್ ಬೇಸ್ಡ್ ಲ್ಯಾಂಡಿಂಗ್ ಸಿಸ್ಟಮ್‌ನಂತೆಯೇ ಪೈಲಟ್‌ಗಳಿಗೆ ಲ್ಯಾಂಡಿಂಗ್ ವೇಳೆ ಸಹಾಯ ಮಾಡುತ್ತದೆ. ಭೂಮಿಯಿಂದ 550 ಮೀ. ಗಿಂತಲೂ ಹೆಚ್ಚಿನ ದೂರದಲ್ಲಿಯೂ ಇದು ಪೈಲಟ್‌ಗಳಿಗೆ ರನ್‌ವೇ ಗೋಚರಿಸುವಂತೆ ಮಾಡಿ, ವಿಮಾನವನ್ನು ಲ್ಯಾಂಡ್ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಒಂದು ವ್ಯತ್ಯಾಸವೆಂದರೆ ಸೈಡ್ ಗ್ರೌಂಡ್ ಬೇಸ್ಡ್ ಸಿಸ್ಟಮ್‌ನಲ್ಲಿ ಕೇವಲ 200 ಅಡಿ ಎತ್ತರದಿಂದ ಪೈಲೆಟ್ ಲ್ಯಾಂಡಿಂಗ್ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಇಂದು ಪ್ರಯೋಗಿಕವಾಗಿ ಬಳಕೆಯಾದ ವಿಮಾನದಲ್ಲಿ 250 ಅಡಿ ಎತ್ತರದಿಂದಲೇ ಪೈಲಟ್ ನಿರ್ಧಾರವನ್ನು ತೆಗೆದುಕೊಂಡು ಲ್ಯಾಂಡ್ ಮಾಡಿದ್ದಾರೆ. ಇಂಡಿಗೋ ಪೈಲಟ್ ಗಗನ್ ಸ್ಯಾಟಲೈಟ್ ಮೂಲಕ ಲಂಬ ಮತ್ತು ಪಾರ್ಶ್ವದ ನ್ಯಾವಿಗೇಶನ್ ನೋಡಿಕೊಂಡು ಲ್ಯಾಂಡಿಂಗ್ ಮಾಡಿದ್ದಾರೆ.
For the first time in the history of the Indian aviation industry, IndiGo has successfully completed an LPV (Localizer Performance with Vertical Guidance) approach on its ATR aircraft using the indigenous Gagan Satellite to land at @aaiksgairport , Rajasthan. @DGCAIndia pic.twitter.com/oiDY4gBbD1
— IndiGo (@IndiGo6E) April 28, 2022
ಭಾರತದ ಗಗನ್ ಹೊರತುಪಡಿಸಿ ವಿಶ್ವದಲ್ಲಿ ಕೇವಲ 3 ಕಡೆಗಳಲ್ಲಿ ಇಂತಹ ವ್ಯವಸ್ಥೆಗಳಿವೆ. ಅವುಗಳೆಂದರೆ ಅಮೆರಿಕ(ಡಬ್ಲ್ಯುಎಎಸ್), ಯುರೋಪ್(ಇಜಿಎನ್‌ಒಎಸ್) ಹಾಗೂ ಜಪಾನ್‌ನ (ಎಮ್‌ಎಸ್‌ಎಎಸ್).
ಜುಲೈ ತಿಂಗಳಿನಲ್ಲಿ ಭಾರತದಲ್ಲಿ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೂ ಗಗನ್ ಉಪಕರಣವನ್ನು ಅಳವಡಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶ ನೀಡಿದೆ.