ಯಾದಗಿರಿ: ಇಂಡಿಕಾ ಕಾರೊಂದು ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ರಬ್ಬನಳ್ಳಿ ಬಳಿ ಈ ಅವಘಡ ಸಂಭವಿಸಿದೆ. ಎಂಜಿನ್ ನಲ್ಲಿದ್ದ ದೋಷದಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇಂಡಿಕಾ ಕಾರ್ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಡಗೇರಾ ಗ್ರಾಮದಿಂದ ಶಹಾಪುರ್ ಕಡೆ ತೆರಳುತ್ತಿತ್ತು. ಈ ವೇಳೆ ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದಿದೆ.
Advertisement
Advertisement
ಘಟನೆಯಿಂದಾಗಿ ಕಾರಿನ ಮಾಲೀಕ ವಿಶ್ವನಾಥ ಸೇರಿದಂತೆ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಇಂಡಿಕಾ ಕಾರ್
Advertisement
ಇತ್ತೀಚೆಗೆ ಮಂಗಳೂರಿನಲ್ಲೂ ಇಂತದ್ದೇ ಘಟನೆಯೊಂದು ನಡೆದಿತ್ತು. ಬಜ್ಪೆ ನಿವಾಸಿ ಜಯರಾಜ್ ಮಂಗಳೂರಿನ ಕಾವೂರಿನಲ್ಲಿ ತಮ್ಮ ಐ 20 ಹುಂಡೈ ಕಾರನ್ನು ನಿಲ್ಲಿಸಿ, ಅಲ್ಲಿಯೇ ಏನೋ ಖರೀದಿಗೆ ಹೋಗಿದ್ದರು. ಈ ವೇಳೆ ಕಾರ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಎಲ್ಲರೂ ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಕಾರನ್ನು ಆವರಿಸಿ, ಸುಟ್ಟು ಭಸ್ಮವಾಗಿತ್ತು.