ಮ್ಯಾಂಚೆಸ್ಟರ್: 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವರುಣಾ ಅಡ್ಡಿ ಪಡಿಸಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 211 ರನ್ ಗಳಿಸಿದೆ.
Advertisement
ಟೀಂ ಇಂಡಿಯಾ ಬೌಲರ್ ಗಳು ಎದುರಾಳಿಗಳು ರನ್ ಗಳಿಸಲು ಪರದಾಡುವಂತೆ ಮಾಡಿದರು. ಇನ್ನಿಂಗ್ಸ್ ಆರಂಭದಲ್ಲೇ 2 ಮೇಡನ್ ಓವರ್ ಮಾಡಿದ ಬೌಲರ್ ಗಳು ಕಿವೀಸ್ ಬ್ಯಾಟ್ಸ್ ಮನ್ ಗಳಿಗೆ ಸವಾಲೆಸೆದರು. ಇತ್ತ ಬುಮ್ರಾ ತಮ್ಮ 2ನೇ ಓವರಿನಲ್ಲೇ ಆರಂಭಿಕ ಮಾರ್ಟಿನ್ ಗುಪ್ಟಿಲ್ ವಿಕೆಟ್ ಪಡೆದು ಮಿಂಚಿದರು. ಪರಿಣಾಮ ರಕ್ಷಣಾತ್ಮಕ ಆಟಕ್ಕೆ ಮುಂದಾದ ಕಿವೀಸ್ ನಾಯಕ ವಿಲಿಯಮ್ಸನ್ ಹಾಗೂ ನಿಕೋಲಾಸ್ 2ನೇ ವಿಕೆಟ್‍ಗೆ 68 ರನ್ ಜೊತೆಯಾಟ ನೀಡಿದರು.
Advertisement
Advertisement
ಈ ಹಂತದಲ್ಲಿ ದಾಳಿಗಳಿದ ಜಡೇಜಾ 28 ರನ್ ಗಳಿಸಿದ್ದ ನಿಕೋಲಾಸ್ ವಿಕೆಟ್ ಪಡೆದು ಕಿವೀಸ್‍ಗೆ 2ನೇ ಆಘಾತ ನೀಡಿದರು. ಬಳಿಕ ಬಂದ ಅನುಭವಿ ಆಟಗಾರ ಟೇಲರ್ ನಾಯಕನೊಂದಿಗೆ ಕೂಡಿ ತಂಡದ ಚೇತರಿಕೆಗೆ ಕಾರಣರಾದರು. ಈ ಜೋಡಿ ಮೂರನೇ ವಿಕೆಟ್‍ಗೆ 65 ರನ್ ಜೊತೆಯಾಟ ನೀಡಿತು. ಇತ್ತ ನಾಯಕ ವಿಲಿಯಮ್ಸನ್ ವೃತ್ತಿ ಜೀವನದ 39ನೇ ಅರ್ಧ ಶತಕವನ್ನು ಪೂರೈಸಿದರು. ಅಲ್ಲದೇ 2019 ಟೂರ್ನಿಯಲ್ಲಿ 500 ರನ್ ಪೂರೈಸಿದರು.
Advertisement
Bad news ????
The rain has increased, and the teams have had to leave the field.
New Zealand: 211/5 (46.1 overs)#INDvNZ | #CWC19 pic.twitter.com/Q0sPZPkhRm
— ICC Cricket World Cup (@cricketworldcup) July 9, 2019
ತಾಳ್ಮೆಯ ಆಟದ ಮೂಲಕ ರನ್ ಪೇರಿಸುತ್ತಿದ್ದ ಕೇನ್ ವಿಲಿಯಮ್ಸನ್ ಹಾಗೂ ಟೇಲರ್ ಜೋಡಿಯನ್ನು ಚಹಲ್ ಬೇರ್ಪಡಿಸಿದರು. 95 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 67 ರನ್ ಗಳಿಸಿದ್ದ ವಿಲಿಯಮ್ಸನ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಬಳಿಕ ಬಂದ ಜಿಮ್ಮಿ ನಿಶಾಮ್ 12 ರನ್ ಗಳಿಸಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 16 ರನ್ ಗಳಿಸಿ ಗ್ರ್ಯಾಂಡ್ ಹೋಮ್ ಭುವನೇಶ್ವರ್‍ಗೆ ವಿಕೆಟ್ ಒಪ್ಪಿಸಿದರು. 44 ಓವರ್ ಗಳಲ್ಲಿ ನ್ಯೂಜಿಲೆಂಡ್ ತಂಡ 200 ರನ್ ಗಳಷ್ಟೇ ಗಳಿಸಿತ್ತು.
???? for ????????
???? for ????????
The fans know the Williamson wicket was a big moment in the game! #CWC19 | #INDvNZ pic.twitter.com/cpz9juxkHa
— ICC Cricket World Cup (@cricketworldcup) July 9, 2019
ಇತ್ತ ವಿಕೆಟ್ ಉರುಳುತ್ತಿದ್ದರೆ ತಂಡಕ್ಕೆ ಆಸೆಯಾಗಿ ನಿಂತಿದ್ದ ಅನುಭವಿ ರಾಸ್ ಟೇಲರ್ 85 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೊಂದಿಗೆ 67 ರನ್ ಗಳಿಸಿದ್ದರು. ಈ ವೇಳೆಗೆ ಮಳೆ 2ನೇ ಬಾರಿಗೆ ಅಡ್ಡಿ ಪಡಿಸಿದ ಪರಿಣಾಮ ಆಟಕ್ಕೆ ಬ್ರೇಕ್ ಬಿತ್ತು. ಭಾರತ ಪರ ಬೀಗಿ ಬೌಲಿಂಗ್ ದಾಳಿ ನಡೆಸಿದ ಬೌಲರ್ ಗಳಾದ ಬುಮ್ರಾ, ಚಹಲ್, ಭುವಿ, ಪಾಂಡ್ಯ, ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.