ಬೆಂಗಳೂರು: ಟ್ವಿಟ್ಟರ್‌ಗೆ ಪರ್ಯಾಯವಾಗಿ ಆರಂಭಗೊಂಡಿದ್ದ ಕೂ (Koo) ಬಾಗಿಲು ಹಾಕಿದೆ. ದೇಶೀಯ ಸಾಮಾಜಿಕ ಜಾಲತಾಣ (Social Media) ವೇದಿಕೆ ಕೂ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಸ್ವಾಧೀನ ಮಾತುಕತೆ ವಿಫಲ ಮತ್ತು ಹೆಚ್ಚಿನ ತಂತ್ರಜ್ಞಾನದ ವೆಚ್ಚಗಳಿಂದ ಕೂ ವೇದಿಕೆಯನ್ನು ಮುಚ್ಚುವುದಾಗಿ ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ((Aprameya Radhakrishna) ಮತ್ತು ಮಯಾಂಕ್ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2.5 ಲಕ್ಷ ಮಂದಿ ಭಾಗಿ, ದೇವಮಾನವನ ಕಾರಿನ ಚಕ್ರದ ಧೂಳನ್ನು ಸಂಗ್ರಹಿಸಲು ಮುಗಿಬಿದ್ದ ಅನುಯಾಯಿಗಳು!
- Advertisement -
- Advertisement -
ಕೂ ಉತ್ತುಂಗದಲ್ಲಿದ್ದಾಗ ಸುಮಾರು 20 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಮತ್ತು 9,000 ವಿಐಪಿಗಳನ್ನು ಒಳಗೊಂಡಂತೆ 1 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿತ್ತು. ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಬಳಕೆದಾರರರನ್ನು ಪ್ರೋತ್ಸಾಹಿಸಲು ಮುಂದಾಗಿದ್ದರೂ ಕೂ ಬಳಕೆದಾರರನ್ನು ತಲುಪಲು ವಿಫಲವಾಗಿತ್ತು.
- Advertisement -
ಭವಿಷ್ಯದ ಉದ್ಯಮಗಳ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ. ಇಲ್ಲಿಯವರೆಗೆ ಸಹಕಾರ ನೀಡಿದ ಬೆಂಬಲಿಗರು, ಹೂಡಿಕೆದಾರರು ಮತ್ತು ಬಳಕೆದಾರರಿಗೆ ಸಂಸ್ಥಾಪಕರು ಕೃತಜ್ಞತೆ ಸಲ್ಲಿಸಿದ್ದಾರೆ.
- Advertisement -