ನವದೆಹಲಿ: ರಷ್ಯಾ (Russia) ಕಚ್ಚಾ ತೈಲ (Crude oil) ಆಮದು ಮತ್ತಷ್ಟು ಹೆಚ್ಚಾಗಿದ್ದು ಮೊದಲ ಬಾರಿಗೆ ಭಾರತ (India) ತಿಂಗಳೊಂದರಲ್ಲೇ ಪ್ರತಿ ದಿನ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿದೆ.
ಎನರ್ಜಿ ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾದ ಮಾಹಿತಿಯ ಪ್ರಕಾರ ಡಿಸೆಂಬರ್ನಲ್ಲಿ 1.19 ದಶಲಕ್ಷ ಬಿಪಿಡಿ(Barrels Per Day) ತೈಲವನ್ನು ಆಮದು ಮಾಡಿದೆ. ಈ ಮೂಲಕ ಸತತ ಮೂರನೇ ಬಾರಿ ರಷ್ಯಾ ಭಾರತದ ಅತಿ ದೊಡ್ಡ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ.
2022ರ ಮಾರ್ಚ್ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಆಮದು ಮಾಡಿಕೊಂಡ ಒಟ್ಟು ತೈಲ ಪೈಕಿ ರಷ್ಯಾ ಪಾಲು ಶೇ. 0.2 ರಷ್ಟಿತ್ತು. ಅಕ್ಟೋಬರ್ 2022 ರಲ್ಲಿ ಮೊದಲ ಬಾರಿಗೆ ಇರಾಕ್ ಮತ್ತು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ರಷ್ಯಾ ಏರಿತ್ತು. ಇದನ್ನೂ ಓದಿ: ಈ ತಿಂಗಳಾಂತ್ಯಕ್ಕೆ ಮತ್ತೆ ಅಮಿತ್ ಶಾ ಎಂಟ್ರಿ – ಸಂಕ್ರಾಂತಿ ಬಳಿಕದ ಕ್ರಾಂತಿಗೆ ವೇದಿಕೆ ಸಿದ್ಧವಾಗಿದ್ಯಾ?
ನವೆಂಬರ್ನಲ್ಲಿ 9,09,403, ಅಕ್ಟೋಬರ್ನಲ್ಲಿ 9,35,556 ಬಿಪಿಡಿ ತೈಲವನ್ನು ಭಾರತ ರಷ್ಯಾದಿಂದ ಆಮದು ಮಾಡಿದೆ. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆಮದು ಮಾಡುವ ದೇಶವಾಗಿದ್ದು, ಶೇ.85 ರಷ್ಟು ತೈಲವನ್ನು ಆಮದು ಮಾಡುತ್ತಿದೆ.
ವೋರ್ಟೆಕ್ಸಾ ಪ್ರಕಾರ ಡಿಸೆಂಬರ್ನಲ್ಲಿ ಇರಾಕ್ನಿಂದ 803,228 ಬಿಪಿಡಿ ಮತ್ತು ಸೌದಿ ಅರೇಬಿಯಾದಿಂದ 718,357 ಬಿಪಿಡಿ ತೈಲವನ್ನು ಭಾರತ ಆಮದು ಮಾಡಿಕೊಂಡಿದೆ.
ರಷ್ಯಾ-ಉಕ್ರೇನ್ ಸಂಘರ್ಷದ ಮೊದಲು, ಭಾರತ ಶೇ.60 ರಷ್ಟು ತೈಲವನ್ನು ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡುತ್ತಿತ್ತು. ಉತ್ತರ ಅಮೆರಿಕದಿಂದ ಶೇ.14, ಪಶ್ಚಿಮ ಆಫ್ರಿಕಾದಿಂದ ಶೇ.12, ಲ್ಯಾಟಿನ್ ಅಮೆರಿಕದಿಂದ ಶೇ.5, ರಷ್ಯಾದಿಂದ ಶೇ.2 ರಷ್ಟು ತೈಲವನ್ನು ಖರೀದಿ ಮಾಡುತ್ತಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k