ಚೀನಾ-ಭಾರತದ ಸಂಬಂಧ ಬಿಗಡಾಯಿಸುತ್ತಿದೆ: ಜೈಶಂಕರ್

Public TV
1 Min Read

ನವದೆಹಲಿ: ಬೀಜಿಂಗ್ ಗಡಿ ಒಪ್ಪಂದ ಉಲ್ಲಂಘಿಸಿದ ಬಳಿಕ ಚೀನಾದೊಂದಿಗಿನ ಭಾರತದ ಸಂಬಂಧ ಹದಗೆಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.

ಮ್ಯೂನಿಚ್ ಸೆಕ್ಯೂರಿಟಿ ಕಾನ್ಫರೆನ್ಸ್ (ಎಂಎಸ್‌ಸಿ) 2022 ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ಜೈಶಂಕರ್, ಕಳೆದ 45 ವರ್ಷಗಳಿಂದ ಚೀನಾ-ಭಾರತದ ಗಡಿಯಲ್ಲಿ ಶಾಂತಿ ಇತ್ತು. 1975ರಿಂದ ಗಡಿಯಲ್ಲಿ ಯಾವುದೇ ಮಿಲಿಟರಿ ಸಾವು-ನೋವುಗಳು ಸಂಭವಿಸುತ್ತಿರಲಿಲ್ಲ. ಆದರೆ ಇದೀಗ ಚೀನಾದಿಂದ ಭಾರತಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

Indian Army 2 large

ಗಡಿ ಎಂಬುವುದು ಇರುವುದೇ ಮಿಲಿಟರಿ ಪಡೆ ಅಥವಾ ವಿದೇಶಿಗರ ಅಕ್ರಮ ಪ್ರವೇಶವನ್ನು ನಿಯಂತ್ರಿಸಲು. ಆದರೆ ಈ ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ. ಇದೀಗ ಚೀನಾದೊಂದಿಗಿನ ಸಂಬಂಧ ಬಹಳ ಕಷ್ಟಕರ ಹಂತ ತಲುಪಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

Minister of External Affairs S Jaishankar 1

ಜೂನ್ 2020ರ ವರೆಗೆ ಚೀನಾದೊಂದಿಗಿನ ಭಾರತದ ಸಂಬಂಧ ಉತ್ತಮವಾಗಿತ್ತು. ಯಾವಾಗ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಭಾರತ-ಚೀನಾ ಮಿಲಿಟರಿ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತೋ ಅಂದಿನಿಂದ ಗಡಿ ಸಂಬಂಧ ಹದಗೆಡುತ್ತ ಬಂದಿದೆ ಎಂದು ಜೈಶಂಕರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *