LatestMain PostNational

ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ – ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

ನವದೆಹಲಿ: ಜನಸಂಖ್ಯಾ ಸ್ಫೋಟ ತಡೆಗೆ ಕೇಂದ್ರ ಸರ್ಕಾರ ಕೈಗೊಂಡಿದ್ದ ಎಲ್ಲಾ ಕ್ರಮಗಳು ಇತ್ತೀಚಿನ ದಿನಗಳಲ್ಲಿ ಫಲ ನೀಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಂಖ್ಯೆ ಪ್ರಕಾರ ಭಾರತದಲ್ಲಿ ಜನಸಂಖ್ಯಾ ದರವು ಇಳಿಮುಖವಾಗಿದೆ. ಜನ ಸಂಖ್ಯಾ ಸ್ಫೋಟದ ಭೀತಿಯಿಂದ ದೇಶ ಪಾರಾಗಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದುಬಂದಿದೆ.

ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೇರುವ ಮಕ್ಕಳ ಸಂಖ್ಯೆಯನ್ನು ಫಲವತ್ತತೆ(ಟಿಎಫ್‍ಆರ್) ಎಂದು ಕರೆಯುತ್ತೇವೆ. ಕೇಂದ್ರ ಸರ್ಕಾರ ಫಲವತ್ತತೆಯ ಮಟ್ಟವನ್ನು 2.1ಕ್ಕೆ ನಿಗದಿಪಡಿಸಿದೆ. ಏಕೆಂದರೆ ಇದು ಜನನ ಮತ್ತು ಮರಣಗಳ ನಡುವೆ ಸಮತೋಲನವನ್ನು ಕಾಪಾಡಲು ಈ ಜನಸಂಖ್ಯೆಯ ಸರಾಸರಿ ಅಗತ್ಯವಿದೆ.

ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ - ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

ಈ ಸಮೀಕ್ಷೆಯ ಪ್ರಕಾರ ಕೇಂದ್ರ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಫಲವತ್ತತೆ ದರ ಕುಸಿದಿದ್ದು, 2ಕ್ಕಿಂತ ಕಡಿಮೆ ಇದೆ. ಕರ್ನಾಟಕದಲ್ಲಿ ಈ ದರ 1.7 ರಷ್ಟಿದೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ದೇಶದ ಜನಸಂಖ್ಯಾ ಸ್ಫೋಟ ಕುಸಿದಿರುವುದು ಕಾಣುತ್ತದೆ.

ಯಾವ ರಾಜ್ಯದಲ್ಲಿ ಎಷ್ಟು?
2ಕ್ಕಿಂತ ಹೆಚ್ಚು ಫಲವತ್ತತೆ ಹೊಂದಿದ ರಾಜ್ಯಗಳು ದೇಶದಲ್ಲಿದೆ. ಅವುಗಳೆಂದರೆ, ಬಿಹಾರ 3, ಮೇಘಾಲಯ 2.9, ಉತ್ತರ ಪ್ರದೇಶ 2.4, ಜಾರ್ಖಂಡ್ 2.3, ಮಣಿಪುರ 2.2ರಷ್ಟಿದೆ.  ಇದನ್ನೂ ಓದಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

ಆಸ್ಸಾಂ, ಹರಿಯಾಣ, ಮಿಜೋರಾಂ, ಉತ್ತರಾಖಂಡ ರಾಜ್ಯಗಳು 1.9ಗಿಂತ ಕಡಿಮೆ ಫಲವತ್ತತೆಯನ್ನು ಹೊಂದಿದೆ. ಹಾಗೆಯೇ ಅರುಣಾಚಲ ಪ್ರದೇಶ, ಛತ್ತೀಸ್‍ಗಢ, ಕೇರಳ, ಒಡಿಶಾ, ತಮಿಳುನಾಡು, ತೆಲಂಗಾಣ ರಾಜ್ಯಗಳು 1.8ಷ್ಟು ಕಡಿಮೆ ಫಲವತ್ತತೆ ಹೊಂದಿದ್ದರೆ. ಕರ್ನಾಟಕ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ನಾಗಲ್ಯಾಂಡ್, ತ್ರಿಪುರ ರಾಜ್ಯಗಳು 1.7ರಷ್ಟಿದೆ.

ಪಶ್ಚಿಮ ಬಂಗಾಳದಲ್ಲಿ 1.6 ಫಲವತ್ತತೆಯನ್ನು ಹೊಂದಿದೆ. ಇನ್ನೂ ರಾಷ್ಟ್ರೀಯ ಸರಾಸರಿಯಂತೆಯೇ  ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ 2.1 ರಷ್ಟಿದೆ.

ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ - ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

2015 ಮತ್ತು 16ರಲ್ಲಿ ನಡೆದ ಸಮೀಕ್ಷೆಯಲ್ಲಿ ಒಟ್ಟು ಫಲವತ್ತತೆ 2.2ರವರೆಗೆ ಇತ್ತು. 2019ರಿಂದ 2021ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಜನಸಂಖ್ಯಾ ಪ್ರಮಾಣ 2ಕ್ಕೆ ಕುಸಿದಿದೆ.  ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ನಾವು ರಾಜಿಯಾಗಲ್ಲ: ಅಮೀರ್‌ಗೆ ಯಶ್ ಉತ್ತರ

ಹೆಣ್ಣು ಮಕ್ಕಳ ಸಂಖ್ಯೆ ಅಧಿಕ: ಪುರುಷ ಪ್ರಧಾನವಾಗಿರುವ ಭಾರತದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. ಸಮೀಕ್ಷೆಯ ಅನ್ವಯ ಕಳೆದ 2 ವರ್ಷಗಳಲ್ಲಿ ಪ್ರತಿ 1000 ಗಂಡು ಮಕ್ಕಳು 1020 ಹೆಣ್ಣು ಮಕ್ಕಳು ಜನಿಸುತ್ತಿದ್ದಾರೆ.

ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ - ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

 

 

ಜನಸಂಖ್ಯಾ ಸ್ಫೋಟ ತಡೆಗೆ ಮೊದಲಿನಿಂದಲೂ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿ ತಂದಿದೆ. ಅದರಲ್ಲೂ 2016ರಲ್ಲಿ ಜಾರಿಗೆ ಬಂದ ಮಿಷನ್ ಪರಿವಾರ ವಿಕಾಸ್ ಯೋಜನೆಯಿಂದ ಗರ್ಭನಿರೋಧಕ ಮತ್ತು ಕುಟುಂಬ ಕಲ್ಯಾಣ ಯೋಜನೆಗಳು ಹೆಚ್ಚೆಚ್ಚು ಲಭ್ಯವಾಗುವಂತೆ ನೋಡಿಕೊಂಡಿತು. ಈ ಯೋಜನೆಯ ಫಲವನ್ನು ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಯಿತು. ಇದೆಲ್ಲದರ ಫಲದಿಂದ ಜನಸಂಖ್ಯೆ ಇಳಿಕೆಯಾಗಿದೆ.

Related Articles

Leave a Reply

Your email address will not be published. Required fields are marked *