ನವದೆಹಲಿ: ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾವು ಮತ್ತು ಉಪ ಉತ್ಪನ್ನಗಳನ್ನು ರಫ್ತು ಮಾಡುವ ಕಾರ್ಯಕ್ಕೆ ಶೀಘ್ರವೇ ಚಾಲನೆ ಸಿಗಲಿದೆ. ಮಾವು ರಫ್ತುಗೆ ಸಂಬಂಧಿಸಿದಂತೆ ಭಾರತ ಮತ್ತು ಯುಎಸ್ ನಿಯಮಗಳನ್ನು ಸರಳಗೊಳಿಸಲು ಒಪ್ಪಿಕೊಂಡಿವೆ ಎಂದು ಆಹಾರ ಉತ್ಪನ್ನಗಳ ರಫ್ತು ಉತ್ಪನ್ನಗಳ ರಫ್ತಿನ ಜವಾಬ್ದಾರಿ ಹೊತ್ತಿರುವ ಸಂಸ್ಥೆ `ಅಪೆಡಾ’ ತಿಳಿಸಿದೆ.
ಇನ್ನು ನಾಲ್ಕು ತಿಂಗಳಲ್ಲಿ ಮಾವಿನ ಋತು ಆರಂಭವಾಗಲಿದೆ. ಈ ಹೊತ್ತಿನಲ್ಲೇ ಭಾರತವು ಯುಎಸ್‍ಗೆ ಮಾವು ರಫ್ತು ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ದಾಳಿಂಬೆ ರಫ್ತು ಕೂಡ ಶೀಘ್ರದಲ್ಲೇ ಪ್ರಾರಂಭವಾಗುವುದು ಎಂದು ಅಪೆಡಾ ಅಧ್ಯಕ್ಷ ಎಂ. ಅಂಗಮುತ್ತು ತಿಳಿಸಿದ್ದಾರೆ. ಇದನ್ನೂ ಓದಿ: ರತನ್ ಟಾಟಾ ಆತ್ಮಕಥೆ – 2 ಕೋಟಿ ರೂ.ಗೆ ಜಾಗತಿಕ ಹಕ್ಕು ಖರೀದಿ
ಭಾರತದ ಮಾವು ಮತ್ತು ದಾಳಿಂಬೆ ರಫ್ತಿಗೆ ಪ್ರತಿಯಾಗಿ ಅಮೆರಿಕವು ಅಮೆರಿಕನ್ ಚೆರ್ರಿ ಹಣ್ಣನ್ನು ನೀಡಿಲಿದೆ. ಈ ಸಂಬಂಧ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.
ಎರಡು ವರ್ಷಗಳ ಹಿಂದೆ ಸುಮಾರು 100 ಕೋಟಿ ರೂ. ಮೌಲ್ಯದ ಮಾವಿನ ಹಣ್ಣು ಹಾಗೂ ಉಪ ಉತ್ಪನ್ನಗಳನ್ನು ಅಮೆರಿಕಾಗೆ ರಫ್ತು ಮಾಡಲಾಗಿತ್ತು. ಮಾವು ಜೊತೆಗೆ ಕೇಸರಿಯನ್ನು ಸಹ ರಫ್ತು ಮಾಡಲಾಗಿತ್ತು. ಅದಾದ ನಂತರ ಹಣ್ಣನ್ನು ಬೆಳೆಯಲು ಹೆಚ್ಚು ರಾಸಾಯನಿಕ ಬಳಸಲಾಗುತ್ತಿದೆ ಎಂದು ಅಮೆರಿಕವು ಭಾರತದ ಮಾವಿನ ಹಣ್ಣನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಇದನ್ನೂ ಓದಿ: ಉದ್ದನೆಯ ಮೀಸೆ ಬಿಟ್ಟ ಕಾನ್ಸ್ಟೇಬಲ್ ಅಮಾನತು
ಈಗ ಎರಡು ವರ್ಷಗಳ ನಂತರ ಮತ್ತೆ ಮಾವಿನ ಹಣ್ಣು ರಫ್ತು ವಿಚಾರವಾಗಿ ಭಾರತ ಮತ್ತು ಯುಎಸ್ ಒಪ್ಪಂದ ಮಾಡಿಕೊಂಡಿವೆ.