ನವದೆಹಲಿ: ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಹ್ಯಾಮಿಲ್ಟನ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದರು. ನ್ಯೂಜಿಲೆಂಡ್ನ ವಿರುದ್ಧ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ತಂಡದ ಕೇಟಿ ಮಾರ್ಟಿನ್ ಅವರ ವಿಕೆಟ್ ಪಡೆಯುವುದರ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ 39 ವಿಕೆಟ್ ಪಡೆದ ಸಾಧನೆ ನಿರ್ಮಿಸಿದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ಗೆ ಶ್ರೀಶಾಂತ್ ವಿದಾಯ
Advertisement
Indian pacer Jhulan Goswami becomes joint-highest wicket-taker in Women’s World Cup history
Read @ANI Story | https://t.co/efKisrSf7Q#Cricket #JhulanGoswami pic.twitter.com/VNVU3Iovdg
— ANI Digital (@ani_digital) March 10, 2022
Advertisement
ಈ ಸಾಧನೆಯೊಂದಿಗೆ ಅವರು 1982 ರಿಂದ 1988 ರವರೆಗೆ ಆಸ್ಟ್ರೇಲಿಯಾದ ಲಿನ್ ಫುಲ್ಸ್ಟನ್ ಜೊತೆ ಅಗ್ರಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಐಪಿಎಲ್ನ ಸಿಕ್ಸರ್ ಕಿಂಗ್ಸ್
Advertisement
ಪಾಕಿಸ್ತಾನದ ವಿರುದ್ಧ 26 ರನ್ಗಳನ್ನು ನೀಡಿ ಜೂಲನ್ 2 ವಿಕೆಟ್ಗಳನ್ನು ಪಡೆದಿದ್ದರು. ಎರಡು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು 2005 ರಿಂದ ಐದು ಮಹಿಳಾ ಕ್ರಿಕೆಟ್ ವಿಶ್ವಕಪ್ಗಳಲ್ಲಿ ಆಡಿ 39 ವಿಕೆಟ್ ಪಡೆದಿದ್ದಾರೆ.