ನವದೆಹಲಿ: ಅಂತಾರಾಷ್ಟ್ರೀಯ ಪ್ರತಿಕೂಲತೆಗಳ ನಡುವೆಯೂ 2022-23ರ ಹಣಕಾಸು ವರ್ಷದಲ್ಲಿ ದೇಶದ ಆಂತರಿಕ ಉತ್ಪನ್ನ (GDP) ದರ 7.2% ರಷ್ಟು ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ (India) ಹೊರಹೊಮ್ಮಿದ್ದು ಒಂದನೇ ಸ್ಥಾನದಲ್ಲೇ ಮುಂದುವರಿದಿದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬುಧವಾರ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ 6.5% ರಷ್ಟು ದಾಖಲಾಗಬಹುದು ಎಂದು ಅಂದಾಜಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ರಷ್ಟು ದಾಖಲಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ನ ಗ್ಯಾರಂಟಿಗಳು ದೇಶವನ್ನು ದಿವಾಳಿಗೆ ತಳ್ಳಬಹುದು: ಮೋದಿ ಎಚ್ಚರಿಕೆ
Advertisement
Advertisement
ಜಾಗತಿಕ ಆರ್ಥಿಕ ಹಿಂಜರಿತ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಪರಿಸ್ಥಿತಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಡುಬರುವ ಏರಿಳಿತಗಳು ದೇಶದ ಬೆಳವಣಿಗೆ ದರದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
Advertisement
ಯಾವ ತ್ರೈಮಾಸಿಕದಲ್ಲಿ ಎಷ್ಟು?
Q1 – 13.5% (ಏಪ್ರಿಲ್-ಜೂನ್, 2022)
Q2 – 6.3% (ಜುಲೈ- ಸೆಪ್ಟೆಂಬರ್, 2022)
Q3 – 4.4% (ಅಕ್ಟೋಬರ್-ನವೆಂಬರ್, 2022)
Q4 – 6.1% (ಜನವರಿ- ಮಾರ್ಚ್, 2023)
Advertisement
ಯಾವ ದೇಶದ ಜಿಡಿಪಿ ಎಷ್ಟು?
ಭಾರತ – 7.2%
ಇಂಡೋನೇಷ್ಯಾ – 5.3%
ಯುಕೆ – 4.1%
ಮೆಕ್ಸಿಕೋ -3.1%
ಚೀನಾ – 3%
ಫ್ರಾನ್ಸ್ – 2.6%
ಅಮೆರಿಕ – 2.1%
2021-22 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ದಾಖಲಾಗಿದ್ದರೆ ಚೀನಾ 8.1%, ಯುಕೆ 7.4% ರಷ್ಟು ದಾಖಲಾಗಿತ್ತು.
Upwards and Onwards!
India becomes the world's fastest-growing economy with a GDP growth rate of 8.7%. #IndiaBouncesBack pic.twitter.com/kbRXG3sZ4N
— MyGovIndia (@mygovindia) May 31, 2022