ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೋರಿಸ್‍ಗಾಗಿ ಭಾರತದ ಮೊದಲ ಅಭಯಾರಣ್ಯ – ತಮಿಳುನಾಡು ಸರ್ಕಾರದಿಂದ ಆದೇಶ

Public TV
2 Min Read
Slender Loris

ಚೆನ್ನೈ: ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೋರಿಸ್‍ಗಾಗಿ (Slender Loris) ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಭಾರತದ ಮೊದಲ ಸ್ಲೆಂಡರ್ ಲೋರಿಸ್ ಅಭಯಾರಣ್ಯ (Slender Loris Sanctuary) ಸ್ಥಾಪಿಸಲು ತಮಿಳುನಾಡು (Tamil Nadu) ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಕಚೇರಿ (Chief Minister’s Office), ಕರೂರ್  (Karur) ಮತ್ತು ದಿಂಡಿಗಲ್ (Dindigul) ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಒಟ್ಟು 11,806 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸ್ಲೆಂಡರ್ ಲೋರಿಸ್ ಅಭಯಾರಣ್ಯವನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಅಧಿಸೂಚಿಸಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಸ್ಲೆಂಡರ್ ಲೋರಿಸ್ ಸಂರಕ್ಷಣೆಯಲ್ಲಿ ಅಭಯಾರಣ್ಯವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇದರ ಸಂರಕ್ಷಣಾ ಪ್ರಯತ್ನದಲ್ಲಿ ಇದು ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರೋಪಿ ಚೇಸಿಂಗ್, ಗುಂಡೇಟಿಗೆ ಮಹಿಳೆ ಸಾವು – ಐವರು ಪೊಲೀಸರಿಗೆ ಗಾಯ

ಚಿಕ್ಕದಾಗಿರುವ ಲೋರಿಸ್‍ಗಳು ಸಸ್ತನಿಗಳಾಗಿವೆ. ಅವು ತಮ್ಮ ಜೀವನದ ಬಹುಪಾಲು ಸಮಯ ಮರಗಳ ಮೇಲೆಯೇ ಕಳೆಯುತ್ತವೆ. ಇವು ಕೃಷಿ ಭೂಮಿಯಲ್ಲಿನ ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ಉಪಯೋಗಕಾರಿಯಾಗಿವೆ. ಭೂಮಂಡಲದ ಪರಿಸರ ವ್ಯವಸ್ಥೆಯಲ್ಲಿ ಈ ಪ್ರಭೇದವು ಪ್ರಮುಖ ಪಾತ್ರ ವಹಿಸುತ್ತದೆ.

ಇಂಟರ್​​ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ ( International Union for the Conservation of Nature) (IUCN) ಪ್ರಕಾರ, ಸ್ಲೆಂಡರ್ ಲೋರಿಸ್ ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಪಟ್ಟಿ ಮಾಡಲಾಗಿದೆ. ಜಾತಿಯ ಉಳಿವು ಅದರ ಆವಾಸಸ್ಥಾನದ ಸುಧಾರಣೆ, ಸಂರಕ್ಷಣೆಯ ಪ್ರಯತ್ನಗಳು ಮತ್ತು ಬೆದರಿಕೆಗಳ ತಗ್ಗಿಸುವಿಕೆಯ ಮೇಲೆ ಅವಲಂಬಿತವಾಗಿದೆ. ಇದನ್ನೂ ಓದಿ: ವಿಶ್ವದಲ್ಲೇ ಫಸ್ಟ್‌ – ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಿದ ನ್ಯೂಜಿಲೆಂಡ್‌!

ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 ರ ನಿಬಂಧನೆಗಳ ಅಡಿ “ಕಡವೂರ್ ಸ್ಲೇನರ್ ಲೋರಿಸ್ ಅಭಯಾರಣ್ಯ ಸ್ಥಾಪಿಸಲು ಅಧಿಸೂಚನೆ ಹೊರಡಿಸಿದೆ. ಪರಿಸರ, ಹವಾಮಾನ ಬದಲಾವಣೆಯಿಂದ ಅರಣ್ಯ ಇಲಾಖೆಗೆ ಈ ಆದೇಶ ನೀಡಲಾಗಿದೆ. ವಿಶೇಷವಾಗಿ ತಮಿಳುನಾಡು ಸರ್ಕಾರವು ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗಾಗಿ ಹಲವಾರು ಪ್ರಯತ್ನಗಳನ್ನು ಕೈಗೊಂಡಿದೆ ಎಂದು ತಿಳಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *