ನವದೆಹಲಿ: ಭಾರತದ ಮೊದಲ ಪ್ರಾದೇಶಿಕ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್(RRTS) ರೈಲು 2023ರ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ದೆಹಲಿ-ಗಾಜಿಯಾಬಾದ್-ಮೀರತ್ 82 ಕಿ.ಮೀ ಉದ್ದದ ಕಾರಿಡಾರ್‌ನಲ್ಲಿ ಚಲಿಸಲಿರುವ ಭಾರತದ ಮೊದಲ ಆರ್‌ಆರ್‌ಟಿಎಸ್ ರೈಲು ಸೇವೆ ಮಾರ್ಚ್ 2023ರ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ತನ್ನದೇ ದಾಖಲೆ ಮುರಿದು ಗಿನ್ನಿಸ್ ದಾಖಲೆ ಬರೆದ ಲಿಮೋಸಿನ್ ಕಾರು
Advertisement
Advertisement
RRTS ರೈಲಿನ ವಿಶೇಷತೆ:
ಆರ್‌ಆರ್‌ಟಿಐ ರೈಲು ಸೇವೆ ಪ್ರಾರಂಭವಾದ ಬಳಿಕ ದೆಹಲಿಯಿಂದ ಮೀರತ್‌ಗೆ ಕೇವಲ 1 ಗಂಟೆಯ ಒಳಗಾಗಿ ಪ್ರಯಾಣಿಸಬಹುದಾಗಿದೆ. ರಸ್ತೆ ಮಾರ್ಗದ ಪ್ರಯಾಣದಲ್ಲಿ ವ್ಯಯಿಸಲಾಗುವ ಸಮಯವನ್ನು ಇದು ಕಡಿತಗೊಳಿಸುವಲ್ಲಿ ಸಹಾಯ ಮಾಡಲಿದೆ. ರಸ್ತೆ ಮಾರ್ಗದಲ್ಲಿ ದೆಹಲಿಯಿಂದ ಮೀರತ್‌ಗೆ 3-4 ಗಂಟೆ ತಗುಲಿದರೆ ಈ ರೈಲು ಕೇವಲ 1 ಗಂಟೆಯಲ್ಲಿ ತಲುಪಿಸುತ್ತದೆ.
Advertisement
ಮೆಟ್ರೋ ರೈಲಿಗಿಂತಲೂ 3 ಪಟ್ಟು ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ಆರ್‌ಆರ್‌ಟಿಐ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ನೀತಿಗೆ ಅನುಗುಣವಾಗಿ ಶೇ.100 ರಷ್ಟು ಭಾರತದಲ್ಲಿಯೇ ತಯಾರಿಸಿರುವುದು ವಿಶೇಷ. ಇದನ್ನೂ ಓದಿ: ಜಪಾನ್‌ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ – ಸುನಾಮಿ ಎಚ್ಚರಿಕೆ
Advertisement
ಹಗುರ ಹಾಗೂ ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಹೊಂದಿರುವ ರೈಲಿನಲ್ಲಿ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಇರಲಿದ್ದು, ಒಂದು ಬಾರಿಗೆ 1,500 ಜನರು ಪ್ರಯಾಣಿಸಬಹುದು. ಉಚಿತ ವೈಫೈ ಕೂಡಾ ರೈಲಿನಲ್ಲಿ ಇರಲಿದ್ದು, ಒಂದು ಕೋಚ್‌ನಲ್ಲಿ ಸಂಪೂರ್ಣ ಪ್ರೀಮಿಯಂ ಕ್ಲಾಸ್ ಇರಲಿದೆ.