ಚೆನ್ನೈ: ಭಾರತೀಯ ರೈಲ್ವೆ ಸೇವೆ ಆರಂಭವಾದ ಬಳಿಕ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಪ್ರಯಾಣಿಕರ ರೈಲು ಸೇವೆ ಆರಂಭವಾಗಿದೆ. ದೇಶದ ಮೊದಲ ಖಾಸಗಿ ರೈಲು ಇದಾಗಿದೆ.
#WATCH: India's first-ever private train service under #BharatGaurav scheme flagged off from Coimbatore to Shirdi
The train will cover several historical destinations on the route while giving the passengers an insight into the cultural heritage of the country pic.twitter.com/Y7pWcVujzt
— INDIA NARRATIVE (@india_narrative) June 15, 2022
Advertisement
ಕೇಂದ್ರ ಸರ್ಕಾರದ `ಭಾರತ್ ಗೌರವ್’ ಯೋಜನೆಯಡಿ ಚಾಲನೆಗೊಂಡ ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ. ಜೂನ್ 14ರ ಸಂಜೆ ಕೊಯಮತ್ತೂರಿನಲ್ಲಿ ಖಾಸಗಿ ರೈಲುಸೇವೆಗೆ ಚಾಲನೆ ದೊರೆತಿದ್ದು, ರೈಲು ತಮಿಳುನಾಡಿನ ಕೊಯಮತ್ತೂರು ಉತ್ತರ ರೈಲು ನಿಲ್ದಾಣದಿಂದ ಶಿರಡಿ ನಡುವೆ ಸಂಚರಿಸುತ್ತದೆ. ಇದನ್ನೂ ಓದಿ: 4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ
Advertisement
Promoting India's rich cultural heritage!
Southern Railway becomes the first zone to get its first Registered service provider under the ‘Bharat Gaurav’ Scheme & commence operations of the maiden service from Coimbatore North to Sainagar Shirdi, today. pic.twitter.com/7cPSj9iP8i
— Ministry of Railways (@RailMinIndia) June 14, 2022
Advertisement
ಶಿರಡಿಗೆ ತಲುಪುವ ಮೊದಲು, ರೈಲು ತಿರುಪುರ್, ಈರೋಡ್, ಸೇಲಂ ಜೋಲಾರ್‌ಪೇಟ್, ಬೆಂಗಳೂರು ಯಲಹಂಕ, ಧರ್ಮಾವರ, ಮಂತ್ರಾಲಯ ರಸ್ತೆ (ನಿಲುಗಡೆ), ಮತ್ತು ವಾಡಿಯಲ್ಲಿ ನಿಲ್ಲುತ್ತದೆ.
Advertisement
ಖಾಸಗಿ ರೈಲಿನ ದರಗಳು ಭಾರತೀಯ ರೈಲ್ವೇಗಳು ವಿಧಿಸುವ ನಿಯಮಿತ ರೈಲು ಟಿಕೆಟ್ ದರಗಳಿಗೆ ಸಮನಾಗಿರುತ್ತದೆ ಮತ್ತು ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ವಿಐಪಿ ದರ್ಶನವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶರದ್ ಪವಾರ್
ದಕ್ಷಿಣ ರೈಲ್ವೇ ಮಜ್ದೂರ್ ಯೂನಿಯನ್‌ಗೆ ಸೇರಿದ ರೈಲ್ವೇ ನೌಕರರ ಗುಂಪು ಖಾಸಗಿ ರೈಲುಸೇವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಖಾಸಗಿ ರೈಲು ಸೇವೆ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.