ಶ್ರೀಹರಿಕೋಟಾ: ಮೊದಲ ಬಾರಿಗೆ ಬೆಂಗಳೂರಿನ ಖಾಸಗಿ ಕಂಪನಿಯ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡಿದ್ದ ಇಸ್ರೋದ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ(ಐಆರ್ಎನ್ಎಸ್ಎಸ್) 1 ಹೆಚ್ ಉಪಗ್ರಹ ಉಡಾವಣೆ ವಿಫಲವಾಗಿದೆ.
ಅಧಿಕ ಉಷ್ಣಾಂಶದ ಕಾರಣದಿಂದ ಉಪಗ್ರಹದ ರಕ್ಷಾ ಕವಚ ತೆರೆದುಕೊಳ್ಳದೆ ನಿಗದಿತ ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದು ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.
Advertisement
ಆಗಿದ್ದು ಏನು?
ಗುರುವಾರ ಸಂಜೆ 7 ಗಂಟೆಗೆ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ನ್ಯಾವಿಗೇಷನ್ ವೆಹಿಕಲ್ (ಪಿಎಸ್ಎಲ್ವಿ) ರಾಕೆಟ್ ಮೂಲಕ ಉಪಗ್ರಹ ನಭಕ್ಕೆ ಚಿಮ್ಮಿತ್ತು. ಒಂದು ಮತ್ತು ಎರಡನೇ ಹಂತ ಯಶಸ್ವಿಯಾಗಿ ಮೂರನೇ ಹಂತದಲ್ಲಿ ಹೀಟ್ ಶೀಟ್ ತೆರೆದುಕೊಳ್ಳದ ಕಾರಣ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ.
Advertisement
ನಿರ್ಮಿಸಿದ್ದು ಯಾರು?
ಐಆರ್ಎನ್ಎಸ್ಎಸ್-1 ಎಚ್ ಉಪಗ್ರಹವನ್ನು ಬೆಂಗಳೂರಿನ ಅಲ್ಫಾ ಡಿಸೈನ್ ಟೆಕ್ನಾಲಜೀಸ್ 70 ವಿಜ್ಞಾನಿಗಳ ತಂಡ ನಿರ್ಮಿಸಿತ್ತು. ಇಸ್ರೋ ಉಸ್ತುವಾರಿಯಲ್ಲಿ 8 ತಿಂಗಳ ಅವಧಿಯಲ್ಲಿ ಈ ಉಪಗ್ರಹ ನಿರ್ಮಾಣವಾಗಿತ್ತು.
Advertisement
ಈ ಉಪಹ್ರಹವನ್ನು ಹಾರಿಸಿದ್ದು ಯಾಕೆ?
ಭಾರತದ ಸ್ವದೇಶಿ ಜಿಪಿಎಸ್ ನಾವಿಕ್(ನಾವಿಗೇಷನ್ ವಿಥ್ ಕಾನ್ಸ್ಟೇಲೇಶನ್) ವ್ಯವಸ್ಥೆಗಾಗಿ ಈಗಾಗಲೇ 7 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ. ಆದರೆ 2013ರ ಜುಲೈ 1ರಂದು ಉಡಾವಣೆ ಮಾಡಲಾಗಿದ್ದ ಉಪಗ್ರಹದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಲ್ಲಿ ಅಳವಡಿಸಲಾಗಿದ್ದ ಆಟೋಮಿಕ್ ಕ್ಲಾಕ್ ಕೆಲಸ ಸ್ಥಗಿತಗೊಂಡ ಹಿನ್ನಲೆಯಲ್ಲಿ ಬದಲಿಗಾಗಿ ಈ ಉಪಗ್ರಹವನ್ನು ಸಿದ್ಧಪಡಿಸಲಾಗಿತ್ತು. 1,425 ಕೆಜಿ ಭಾರದ ಉಪಗ್ರಹವನ್ನು ಪಿಎಸ್ಎಲ್ವಿ – ಸಿ39 ರಾಕೆಟ್ ಹೊತ್ತು ಸಾಗಿತ್ತು. ಈ ಪ್ರಯೋಗ ಯಶಸ್ವಿ ಆಗಿದ್ದರೆ ಜಿಪಿಎಸ್ ವ್ಯವಸ್ಥೆಗೆ
ಸಹಕಾರಿಯಾಗುತ್ತಿತ್ತು.
Advertisement
ಸೇವೆ ಆರಂಭ ಯಾವಾಗ?
ಸ್ವದೇಶಿ ಜಿಪಿಎಸ್ ನಾವಿಕ್ 2018ರ ಮೊದಲಾರ್ಧದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ. ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ 7 ಉಪಗ್ರಹಗಳನ್ನು ಹೊಂದಿದ್ದು ಈಗ ನಿಖರತೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತಿದ್ದು, ಮುಂದಿನ ವರ್ಷ ಮೊದಲಾರ್ದದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ ಅಹಮದಾಬಾದ್ನಲ್ಲಿರುವ ಸ್ಪೇಸ್ ಅಪ್ಲಿಕೇಶನ್ ಸೆಂಟರ್(ಎಸ್ಎಎಸ್) ನಿರ್ದೇಶಕ ತಪನ್ ಮಿಶ್ರಾ ಮೇ ತಿಂಗಳಿನಲ್ಲಿ ತಿಳಿಸಿದ್ದರು.
ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಐಆರೆನ್ಎಸ್ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2016ರ ಏಪ್ರಿಲ್ 28ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.
ಯೋಜನೆಗೆ ಕೈ ಹಾಕಿದ್ದು ಯಾಕೆ?
1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡುಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ.
ಲಾಭ ಏನು?
ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.
ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
ಪ್ರಸ್ತುತ ವಿಶ್ವದಲ್ಲಿ ಅಮೆರಿಕ,(ಜಿಪಿಎಸ್), ಯುರೋಪಿಯನ್ ಒಕ್ಕೂಟ(ಗೆಲಿಲಿಯೊ), ರಷ್ಯಾ(ಗ್ಲೋನಾಸ್), ಚೀನಾ(ಬೈಡೂ) ಜಿಪಿಎಸ್ ವ್ಯವಸ್ಥೆಯನ್ನು ಹೊಂದಿತ್ತು. ಐದನೇ ದೇಶವಾಗಿ ಭಾರತ ಈ ಪಟ್ಟಿಗೆ ಸೇರ್ಪಡೆಯಾಗಿದೆ.
Satellite got separated internally but it is enclosed within heat shield, fourth stage: ISRO Chief AS Kiran Kumar on failed IRNSS-1H mission pic.twitter.com/j0CUdkFlP0
— ANI (@ANI) August 31, 2017
All the best #ISRO ! #IRNSS1H to be launched TODAY at 19:00 hrs from #Sriharikota . @PMOIndia
pic.twitter.com/8tTBmxhSM7
— Dr Jitendra Singh (@DrJitendraSingh) August 31, 2017
Presenting a few snapshots of the journey before the journey#IRNSS1H Spacecraft integrated with #PSLVC39 pic.twitter.com/qgZS7wMMLv
— PIB India (@PIB_India) August 31, 2017
LIVE telecast of scheduled launch of #PSLVC39/#IRNSS1H Mission today 18:59hrs from Sriharikota on #Doordarshan & @ISRO's website@DDNewsLive pic.twitter.com/23gdNc7xng
— Doordarshan Kisan दूरदर्शन किसान (@DDKisanChannel) August 31, 2017