ನವದೆಹಲಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ಇತ್ತೀಚೆಗೆ ಆಫ್ರಿಕನ್ ದೇಶದಿಂದ ಭಾರತಕ್ಕೆ ಬಂದಿದ್ದರು ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ (Monkeypox) ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ಸೋಮವಾರ ದೃಢಪಡಿಸಿದೆ.
ಭಾನುವಾರ (ಸೆ.8) ಶಂಕಿತ ವ್ಯಕ್ತಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮಾದರಿ ಪರೀಕ್ಷೆ ಬಳಿಕ ಮಂಕಿಪಾಕ್ಸ್ ದೃಢಪಟ್ಟಿರುವುದಾಗಿ ಸಚಿವಾಲಯ ತಿಳಿಸಿದೆ. ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲಾಡ್-2ನ Mpox ವೈರಸ್ ಇರುವಿಕೆಯನ್ನು ಪ್ರಯೋಗಾಲಯ ಪರೀಕ್ಷೆ ದೃಢಪಡಿಸಿದೆ. ಈ ಹಿನ್ನೆಲೆ ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಸೋಂಕಿತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸದೆ, ರೋಗಿಯು ಸ್ಥಿರವಾಗಿದ್ದಾರೆ, ಇತರೇ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
Advertisement
Advertisement
2022ರ ಜುಲೈ ತಿಂಗಳಲ್ಲಿ ಕೇರಳದಲ್ಲಿ 3 ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. UAE (ಯುನೈಟೆಡ್ ಅರಬ್ ಎಮಿರೇಟ್ಸ್)ಯಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡ ನಂತರ ಉಲ್ಬಣಗೊಂಡಿತ್ತು. ಇದನ್ನೂ ಓದಿ: ಮುಡಾ ಕೇಸ್‌ನ್ನು ಬಿತ್ತರಿಸದಿರಲಿ ಅಂತಾ ದರ್ಶನ್ ಕೇಸ್ ಫೋಟೋ ವೈರಲ್ ಮಾಡ್ತಾ ಇದ್ದೀರಾ? – ಛಲವಾದಿ ಆಕ್ಷೇಪ
Advertisement
ರಾಜ್ಯಗಳಿಗೆ ಸೂಚನೆ:
ಮೊದಲ ಪ್ರಕರಣದ ವರದಿಯಾದ ಬೆನ್ನಲ್ಲೇ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿರುವ ಕೆಂದ್ರ ಆರೋಗ್ಯ ಸಚಿವಾಲಯ, ಮಂಕಿಪಾಕ್ಸ್ ಬಗ್ಗೆ ಜನಸಾಮಾನ್ಯರಿಗಿರುವ ಅನಗತ್ಯ ಭೀತಿಯನ್ನು ನಿವಾರಿಸುವಂತೆ ಸೂಚನೆ ನೀಡಿದೆ. ಭಾರತದಲ್ಲಿ ಹೊಸದಾಗಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲಿನ ಐಸೋಲೇಷನ್ ಸೌಲಭ್ಯ, ತರಬೇತಿ ಪಡೆದ ವೈದ್ಯರು ಇರುವಂತೆ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳು ಇರುವಂತೆ ನೋಡಿಕೊಳ್ಳಬೇಕು. ಶಂಕಿತರು ಮತ್ತು ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದ ಇತರರನ್ನು ಪತ್ತೆ ಮಾಡುವ ಕೆಲಸವನ್ನು ಮಾಡಬೇಕು ಎಂದು ರಾಜ್ಯಗಳಿಗೆ ಸಚಿವಾಲಯ ಸೂಚನೆ ನೀಡಿದೆ.
Advertisement
ಕರ್ನಾಟಕದಲ್ಲೂ ಹೈ ಅಲರ್ಟ್:
ವಿದೇಶಗಳಲ್ಲಿ ಮಂಕಿ ಪಾಕ್ಸ್ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಈಗಾಗಲೇ ನಿಗಾ ವಹಿಸಿದೆ. ಎರಡುವಾರಗಳ ಹಿಂದೆಯೇ ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್, ಮಂಕಿಪಾಕ್ಸ್ ಕಾಯಿಲೆಗೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ಬೆಡ್ ಹಾಸಿಗೆ ಮೀಸಲು ಇಡಲಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ರಾಜ್ಯದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ (ICU) ಬೆಡ್ ಸಿದ್ಧತೆಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್
ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುವ ರೋಗವೇ ಮಂಕಿಪಾಕ್ಸ್. ಈ ವೈರಸ್ ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ. ಕ್ಲಾಡ್ ಐ ಮತ್ತು ಕ್ಲಾಡ್ ಐಐ ಎಂಬ ಎರಡು ವಿಧದ ಮಂಕಿಪಾಕ್ಸ್ ಸೋಂಕುಗಳಿವೆ. ಕ್ಲಾಡ್ ಐ ಮಧ್ಯ ಆಫ್ರಿಕಾದಲ್ಲಿ ಕಂಡುಬಂತು. ಕ್ಲಾಡ್ ಐಐ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಐಬಿ ಎಂದು ಕರೆಯಲ್ಪಡುವ ಕ್ಲಾಡ್ ಐನ ಹೊಸ ರೂಪಾಂತರ ಬಹುಬೇಗ ಹರಡುತ್ತದೆ.
ಮೊದಲು ಪತ್ತೆಯಾಗಿದ್ದೆಲ್ಲಿ?
ಆಫ್ರಿಕಾ ಖಂಡದ ದೇಶಗಳು. (1958ರಲ್ಲಿ ಮಂಕಿಪಾಕ್ಸ್ ಮೊದಲ ಬಾರಿಗೆ ಪತ್ತೆಯಾಯಿತು. ಈ ವೈರಾಣುವಿನ ಮೂಲ ಯಾವುದು ಎಂದು ಈವರೆಗೆ ಪತ್ತೆಯಾಗಿಲ್ಲ). ಇದನ್ನೂ ಓದಿ: ಹರಿಯಾಣದಲ್ಲಿ ಆಪ್-ಕಾಂಗ್ರೆಸ್ ಮೈತ್ರಿಗೆ ಬ್ರೇಕ್? – 20 ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್
ಸೋಂಕಿನ ಲಕ್ಷಣಗಳೇನು?
ಸೋಂಕು ತಗುಲಿದ ನಂತರ 6ರಿಂದ 13 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ 5ರಿಂದ 21 ದಿನಗಳ ಅವಧಿಯಲ್ಲೂ ಕಾಣಿಸಿಕೊಳ್ಳಬಹುದು.
* ಜ್ವರ
* ತೀವ್ರವಾದ ತಲೆನೋವು
* ದುಗ್ಧರಸ ಗ್ರಂಥಿಗಳಲ್ಲಿ ಊತ
* ಬೆನ್ನು ನೋವು
* ಸ್ನಾಯು ನೋವು
* ತೀವ್ರತರ ನಿತ್ರಾಣ
* ಮುಖ, ಕೈ, ಕಾಲುಗಳು, ಹಸ್ತ, ಪಾದಗಳಲ್ಲಿ ದುದ್ದುಗಳು
* 95% ಪ್ರಕರಣಗಳಲ್ಲಿ ಮುಖದಲ್ಲಿಯೇ ಹೆಚ್ಚು ದುದ್ದುಗಳು ಕಾಣಿಸಿಕೊಳ್ಳುತ್ತವೆ
ಹರಡುವುದು ಹೇಗೆ?
ಸೋಂಕು ಪೀಡಿತ ಪ್ರಾಣಿಯಿಂದ ಮನುಷ್ಯರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಮಂಕಿಪಾಕ್ಸ್ ವೈರಸ್ ಹರಡುತ್ತದೆ.
* ಸೋಂಕು ತಗುಲಿದ ಪ್ರಾಣಿಗಳ ಜೊತೆ ನೇರ ಸಂಪರ್ಕ ಹೊಂದುವ ಮನುಷ್ಯರಿಗೆ ರೋಗ ಹರಡುತ್ತದೆ.
* ರೋಗಕಾರಕ ಪ್ರಾಣಿಗಳ ರಕ್ತ, ಚರ್ಮ, ಗಾಯದಿಂದ.
* ರೋಗ ತಗುಲಿರುವ ಪ್ರಾಣಿಗಳ ಮಾಂಸ ಸೇವನೆ.
* ಸೋಂಕಿತ ವ್ಯಕ್ತಿಯ ಉಸಿರಾಟದಿಂದ ಹೊರಬೀಳುವ ಕಣಗಳಿಂದ.
* ಸೋಂಕಿತನ ಚರ್ಮದ ಗಾಯದಲ್ಲಿನ ಕೀವಿನಿಂದ.
* ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣ.
* ಪ್ರಸವದ ವೇಳೆ ಅಥವಾ ಪ್ರಸವಾನಂತರ ನಿಕಟ ಸಂಪರ್ಕದಿಂದ.
ತಡೆ ಹೇಗೆ?
* ಚರ್ಮದಲ್ಲಿ ದುದ್ದು ಕಾಣಿಸಿಕೊಂಡವರಿಂದ ದೂರ ಇರುವುದು, ದುದ್ದು ಮುಟ್ಟದಿರುವುದು.
* ಸೋಂಕಿತರನ್ನು ಆಲಂಗಿಸಿಕೊಳ್ಳಬೇಡಿ, ಲೈಂಗಿಕ ಸಂಪರ್ಕ ಮಾಡಬೇಡಿ.
* ಸೋಂಕಿತರೊಂದಿಗೆ ಆಹಾರ ಸೇವನೆ, ಬಟ್ಟಲು, ಲೋಟ ಇತ್ಯಾದಿ ವಸ್ತುಗಳನ್ನು ಹಂಚಿಕೊಳ್ಳದಿರುವುದು.
* ಸೋಂಕಿತರು ಬಳಿಸಿದ ಬಟ್ಟೆ, ಟವಲ್, ಹೊದಿಕೆ ಮುಟ್ಟದಿರುವುದು.
* ಸೋಂಕಿತ ಪ್ರಾಣಿಗಳನ್ನು ಮುಟ್ಟದಿರುವುದು.
* ಸೋಂಕಿತರಿಂದ ಪ್ರತ್ಯೇಕವಾಗಿ ಇರಬೇಕು.