ತಿರುವನಂತಪುರಂ: ಭಾರತದ ಮೊದಲ ಮಂಕಿಪಾಕ್ಸ್ ಸೋಂಕು ಕೇರಳದ ವ್ಯಕ್ತಿಯೊಬ್ಬರಲ್ಲಿ ಕಂಡುಬಂದಿದ್ದು, ಅವರು ಇದೀಗ ವೈರಸ್‌ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಕೊಲ್ಲಂ ಮೂಲದ ವ್ಯಕ್ತಿ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಇಂದು ಬಿಡುಗಡೆಯಾಗಿದ್ದಾರೆ.
ಜುಲೈ 12ರಂದು ದುಬೈನಿಂದ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಮರಳಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗದ ಲಕ್ಷಣ ಕಂಡು ಬಂದು, ಜುಲೈ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿ: ಫ್ರೈಡ್ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ
Advertisement
Advertisement
ಇದೀಗ ಭಾರತದ ಮೊದಲ ಮಂಕಿಪಾಕ್ಸ್ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದಲ್ಲಿ ಕಂಡುಬಂದಿದ್ದ ಗುಳ್ಳೆಗಳು ಸಂಪೂರ್ಣವಾಗಿ ಗುಣವಾಗಿದೆ. ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗುವುದು ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ತಿಳಿಸಿದ್ದರು. ಇದನ್ನೂ ಓದಿ: ಮಳೆ ನೀರಿಗೆ ಕೊಚ್ಚಿ ಹೋದ ನಿರ್ಮಾಣ ಹಂತದ ಸೇತುವೆ
Advertisement
ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿಗೆ ತುತ್ತಾಗಿದ್ದ ಇನ್ನಿಬ್ಬರ ಆರೋಗ್ಯದ ಸ್ಥಿತಿಯೂ ಸುಧಾರಿಸುತ್ತಿದೆ. ಭಾರತದಲ್ಲಿ ಮೊದಲ 3 ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದ ನೆರೆಯ ಕೇರಳದಲ್ಲಿ ಅಲ್ಲಿನ ಸರ್ಕಾರ ರೋಗ ತಡೆಗಟ್ಟುವಿಕೆ ಹಾಗೂ ಕಣ್ಗಾವಲು ಕ್ರಮಗಳನ್ನು ಹೆಚ್ಚಿಸಿದೆ.