ತಮಿಳುನಾಡು | ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

Public TV
1 Min Read
Tamil Nadu Glass Bridge

ಚೆನ್ನೈ: ಕನ್ಯಾಕುಮಾರಿ (Kanyakumari) ಕರಾವಳಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ ಮತ್ತು 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ ಗಾಜಿನ ಸೇತುವೆಯನ್ನು (Glass Bridge) ತಮಿಳುನಾಡು (Tamil Nadu) ಸಿಎಂ ಎಂ.ಕೆ ಸ್ಟಾಲಿನ್ (M.K Stalin) ಅವರು ಸೋಮವಾರ ಸಂಜೆ ಉದ್ಘಾಟಿಸಿದ್ದಾರೆ.

Tamil Nadu Glass Bridge 1

ಈ ಗಾಜಿನ ಸೇತುವೆಯು ದೇಶದಲ್ಲೇ ಮೊದಲನೆಯದಾಗಿದೆ. ಪ್ರವಾಸಿಗರಿಗೆ ಇಬ್ಬರು ಮಹಾನ್‌ ವ್ಯಕ್ತಿಗಳ ಸ್ಮಾರಕಗಳು ಮತ್ತು ಸುತ್ತಲೂ ಸಮುದ್ರದ ವೀಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿದೆ. ಅಲ್ಲದೇ ಈ ಸೇತುವೆ ಸಮುದ್ರದ ಮೇಲೆ ನಡೆಯುವ ರೋಮಾಂಚಕ ಅನುಭವವನ್ನು ನೀಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರವು 37 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಿದೆ. ಬೌಸ್ಟ್ರಿಂಗ್ ಕಮಾನನ್ನು ಗಾಜಿನ ಸೇತುವೆಗೆ ಲವಣಯುಕ್ತ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸೇತುವೆ 77 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವಿದೆ.

ಉದ್ಘಾಟನೆಯ ನಂತರ ಎಂ.ಕೆ ಸ್ಟಾಲಿನ್ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಸಂಸದೆ ಕನಿಮೋಳಿ ಮತ್ತು ಹಿರಿಯ ಅಧಿಕಾರಿಗಳು ಸೇತುವೆಯ ಮೇಲೆ ಓಡಾಡಿ ಸಂಭ್ರಮಿಸಿದ್ದಾರೆ. ಬಳಿಕ ತಿರುವಳ್ಳುವರ್ ಪ್ರತಿಮೆ ಬಳಿ ಲೇಸರ್ ಲೈಟ್ ಶೋ ನಡೆಯಿತು.

Share This Article