ಭೋಪಾಲ್: ಭಾರತದ ಮೊದಲ ಹಸು ಅಭಯಾರಣ್ಯವನ್ನು ಮಧ್ಯಪ್ರದೇಶ ಸರ್ಕಾರ ಖಾಸಗೀಕರಣಗೊಳಿಸಲು ಮುಂದಾಗಿದೆ.
ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಸೆಪ್ಟೆಂಬರ್ 2017 ರಲ್ಲಿ ಸ್ಥಾಪಿಸಿದ ಭಾರತದ ಮೊದಲ ಹಸು ಅಭಯಾರಣ್ಯವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರವು ಖಾಸಗೀಕರಣಗೊಳಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಭೋಪಾಲ್‍ನಿಂದ ವಾಯುವ್ಯಕ್ಕೆ 190 ಕಿ.ಮೀ ದೂರದಲ್ಲಿರುವ ಅಗರ್ ಮಾಲ್ವಾದಲ್ಲಿರುವ ಕಾಮಧೇನು ಗೋ ಅಭರಣ್ಯವನ್ನು ಗೋ ಸಂವರ್ಧನ್ ಮಂಡಳಿಯು ಸುಮಾರು 32 ಕೋಟಿ ರೂ ವೆಚ್ಚದಲ್ಲಿ 472 ಎಕ್ರೆ ಪ್ರದೇಶದಲ್ಲಿ ನಿರ್ಮಾಣ ಮಾಡಿತ್ತು. ಈ ಅಭಯಾರಣ್ಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಹಸುಗಳು ವಾಸಿಸುತ್ತಿವೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ವಿಭಾಗದ ಉನ್ನತ ಅಧಿಕಾರಿಯೊಬ್ಬರು, ಆರ್ಥಿಕ ಬಿಕ್ಕಟ್ಟಿನಿಂದ ಹಸು ಅಭಯಾರಣ್ಯವನ್ನು ಖಾಸಗೀಕರಣ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಆಸಕ್ತ ಸಂಸ್ಥೆಗಳನ್ನು ಆಹ್ವಾನಿಸಲು ಇಲಾಖೆ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿಸಿದ್ದಾರೆ.
Advertisement
“ಅಭಯಾರಣ್ಯದಲ್ಲಿ ಕಳಪೆ ನಿರ್ವಹಣೆ ಮತ್ತು ಹಸುಗಳ ನಿರಂತರ ಸಾವಿನ ವಿಷಯಗಳು ಹಲವು ಬಾರಿ ತೊಂದರೆಯಾಗಿದೆ. ಇದನ್ನು ಸುಧಾರಿಸಿ ಸೌಲಭ್ಯಗಳನ್ನು ನೀಡಲು ಸರ್ಕಾರ ಪ್ರಯತ್ನಿಸಿದರೂ ಅದನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಅಕ್ಷಯ್‍ಪಾತ್ರೆಯಂತಹ ಪ್ರಸಿದ್ಧ ಸರ್ಕಾರೇತರ ಸಂಸ್ಥೆಗಳು ಅಭಯಾರಣ್ಯವನ್ನು ಯಾವುದೇ ಲಾಭವಿಲ್ಲದೆ ನಷ್ಟದಲ್ಲಿ ನಿರ್ವಹಿಸಲು ಆಸಕ್ತಿ ತೋರಿಸಿದವು. ಆದರೆ ನಾವು ನಿಯಮಗಳ ಪ್ರಕಾರ ಅಭಯಾರಣ್ಯವನ್ನು ಹಸ್ತಾಂತರಿಸುತ್ತೇವೆ” ಎಂದು ಅಧಿಕಾರಿ ಹೇಳಿದರು.
ಕಳೆದ ಒಂದು ವರ್ಷದಲ್ಲಿ 600 ಕ್ಕೂ ಹೆಚ್ಚು ಹಸುಗಳು ಹವಾಮಾನ ವೈಪರೀತ್ಯದಿಂದ ಅಭಯಾರಣ್ಯದಲ್ಲಿ ಸಾವನ್ನಪ್ಪಿವೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ಇಲಾಖೆ ಸಚಿವ ಲಖನ್ ಸಿಂಗ್ ಯಾದವ್, ನಾವು ಸಾರ್ವಜನಿಕ ಸಹಭಾಗಿತ್ವವನ್ನು ಬಯಸುತ್ತೇವೆ. ನಾವು ಹಣ ಸಂಪಾದನೆಗಾಗಿ ಅಭಯಾರಣ್ಯವನ್ನು ಖಾಸಗೀಕರಣ ಮಾಡಿ ಕಂಪನಿಗೆ ನೀಡುತ್ತಿಲ್ಲ. ಆದರೆ ಸಾಮಾಜಿಕ ಅಥವಾ ಧಾರ್ಮಿಕ ಸಂಸ್ಥೆಯು ಅಭಯಾರಣ್ಯ ನಿರ್ವಹಿಸಲಿ ಮತ್ತು ಹಸುಗಳಿಗೆ ಸೇವೆ ಸಲ್ಲಿಸಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಗೋ ಸಂವರ್ಧನ ಮಂಡಳಿಯ ಮಾಜಿ ಅಧ್ಯಕ್ಷ ಸ್ವಾಮಿ ಅಖಿಲೇಶ್ವರನಂದ್ ಗಿರಿ, ಬಿಜೆಪಿಯೂ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತಿದೆ. ಸರ್ಕಾರವು ಅಭಯಾರಣ್ಯವನ್ನು ನಡೆಸುವುದು ಅಸಾಧ್ಯವಾದ ಕಾರಣ ನಾನು ಈ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.