ಮುಂಬೈ: ಕೋವಿಡ್-19 ಹೊಸ ರೂಪಾಂತರಿ ‘ಎಕ್ಸ್‌ಇʼ (XE) ಭಾರತದ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ.
ವೈರಸ್‌ನ ಹೊಸ ರೂಪಾಂತರಿ ಕಂಡುಬಂದಿರುವ ರೋಗಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಬೃಹನ್‌ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಇದನ್ನೂ ಓದಿ: ಮತ್ತೆ ಶಾಕ್ ಕೊಟ್ಟ ಕೋವಿಡ್- ಇಂಗ್ಲೆಂಡ್‌ನಲ್ಲಿ ʻXEʼ ಹೊಸ ರೂಪಾಂತರಿ ಪತ್ತೆ
Advertisement
Advertisement
ಹೊಸ ವರ್ಷದ ಆರಂಭದಲ್ಲಿ ರೂಪಾಂತರಿ ʼಎಕ್ಸ್‌ಇʼ ತಳಿ ವಿಶ್ವದಲ್ಲೇ ಪ್ರಥಮ ಬಾರಿಗೆ ಇಂಗ್ಲೆಂಡ್‌ನಲ್ಲಿ ವರದಿಯಾಗಿತ್ತು. ಈ ದೇಶದಲ್ಲಿ ಇದುವರೆಗೆ 637 ಪ್ರಕರಣಗಳು ವರದಿಯಾಗಿವೆ ಎಂದು ಬ್ರಿಟನ್ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
Advertisement
ಇದು ಓಮಿಕ್ರಾನ್ ಬಿಎ.1, ಬಿಎ.2ನ ಮರುಸಂಯೋಜಕವಾಗಿದೆ. ಈ ಹೊಸ ರೂಪಾಂತರಿ, ಓಮಿಕ್ರಾನ್‌ಗಿಂತಲೂ ವೇಗವಾಗಿ ಹರಡಬಲ್ಲದು ಎಂದು ಡಬ್ಲ್ಯೂಎಚ್‌ಒ ಮಾಹಿತಿ ನೀಡಿದೆ. ಇದನ್ನೂ ಓದಿ: ದೇಶದಲ್ಲಿ ಇಬ್ಬಗೆಯ ರಾಜಕೀಯ: ಪ್ರತಿ ಪಕ್ಷಗಳ ವಿರುದ್ಧ ಮೋದಿ ಕಿಡಿ
Advertisement
ಹೊಸ ತಳಿಯು ರೋಗದ ಗುಣಲಕ್ಷಣ, ತೀವ್ರತೆ ಮತ್ತು ಪ್ರಸರಣದಲ್ಲಿ ಓಮಿಕ್ರಾನ್‌ಗೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.