ಮುಂಬೈ: ಆ್ಯಪಲ್ (Apple) ಉತ್ಪನ್ನಗಳು ಎಷ್ಟು ಜನಪ್ರಿವೆಂದರೆ ಭಾರತ (India) ಮಾತ್ರವಲ್ಲದೇ ವಿಶ್ವದ ಬಹತೇಕ ದೇಶಗಳಲ್ಲಿ ಜನರು ಇದನ್ನು ಮುಗಿಬಿದ್ದು ಖರೀದಿಸುತ್ತಾರೆ. ಬೆಲೆ ಹೆಚ್ಚಿದ್ದರೂ ಆ್ಯಪಲ್ ತನ್ನದೇ ಒಂದು ಸ್ಟ್ಯಾಂಡರ್ಡ್ ಅನ್ನು ಕಾಪಾಡಿಕೊಂಡು ಬಂದಿದೆ. ಇದೀಗ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ (Apple Store) ಮುಂಬೈನಲ್ಲಿ (Mumbai) ಉದ್ಘಾಟನೆಯಾಗಿದೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್ ಏಪ್ರಿಲ್ 18ರಂದು ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಸೇವೆ ನೀಡಲು ಪ್ರಾರಂಭಿಸಿದೆ. ಸ್ಟೋರ್‌ಗೆ ಆಗಮಿಸುವ ಗ್ರಾಹಕರು ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಸ್ಟೋರ್‌ಗೆ ಫ್ಯಾಕ್ಟರಿಯಿಂದ ನೇರವಾಗಿ ಉತ್ಪನ್ನಗಳು ಆಗಮಿಸುವುದರಿಂದ ಮಾರುಕಟ್ಟೆಯ ಬೆಲೆಗಿಂತ ಅಗ್ಗದಲ್ಲಿ ಉತ್ಪನ್ನಗಳು ಗ್ರಾಹಕರ ಕೈಗೆಟುಕಲಿದೆ.
Advertisement
Advertisement
ಆ್ಯಪಲ್ ಸ್ಟೋರ್‌ನ ವಿಶೇಷತೆಗಳೇನು?
ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನ ಮೂಲೆಯಲ್ಲಿ ಬೃಹತ್ 2 ಅಂತಸ್ತಿನ ಗಾಜಿನಿಂದ ಮಾಡಲಾದ ಸ್ಟೋರ್ ಇದಾಗಿದೆ. ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಆ್ಯಪಲ್ ಉತ್ಪನ್ನಗಳು ಇಲ್ಲಿ ದೊರೆಯಲಿದೆ. ಮ್ಯಾಕ್‌ಬುಕ್, ಐಫೋನ್ (iPhone), ಐಪ್ಯಾಡ್, ವಾಚ್‌ಗಳನ್ನು ಹೊರತುಪಡಿಸಿ ಸ್ಟೋರ್ ಆ್ಯಪಲ್ ಆರ್ಕೇಡ್, ಆ್ಯಪಲ್ ಹೋಮ್‌ಪಾಡ್, ಆ್ಯಪಲ್ ಮ್ಯೂಸಿಕ್ ಹಾಗೂ ಆ್ಯಪಲ್ ಟಿವಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
Advertisement
ಮುಂಬೈ ಆ್ಯಪಲ್ ಸ್ಟೋರ್‌ನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ 100 ಸಿಬ್ಬಂದಿಯಿದ್ದಾರೆ. ಅದರಲ್ಲಿ ಶೇ.50 ರಷ್ಟು ಸಿಬ್ಬಂದಿ ಮಹಿಳೆಯರೇ ಇದ್ದಾರೆ. ಮುಖ್ಯವಾಗಿ ಕಂಪನಿ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದ 18 ಭಾಷೆಗಳನ್ನು ಒಳಗೊಂಡಂತೆ 25 ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಿದೆ. ಇದನ್ನೂ ಓದಿ: ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು
Advertisement
ಇದೀಗ ಅಮೆರಿಕ ಮೂಲದ ಆ್ಯಪಲ್ ಕಂಪನಿಯ ಮೊದಲ ಮಳಿಗೆ ಭಾರತದಲ್ಲಿ ಏಪ್ರಿಲ್ 18ರಂದು ಮುಂಬೈನಲ್ಲಿ ಪ್ರಾರಂಭವಾಗಿದ್ದು, 2ನೇ ಮಳಿಗೆ ಏಪ್ರಿಲ್ 20ರಂದು ದೆಹಲಿಯಲ್ಲಿ (Delhi) ಆರಂಭಗೊಳ್ಳಲಿದೆ. ಈ ಎರಡೂ ಮಳಿಗೆಗಳ ಉದ್ಘಾಟನೆಗೆ ಸಂಸ್ಥೆಯ ಸಿಇಒ ಟಿಮ್ ಕುಕ್ (Tim Cook) ಸ್ವತಃ ಭಾರತಕ್ಕೆ ಆಗಮಿಸಿದ್ದಾರೆ.
ಆ್ಯಪಲ್ ಕಂಪನಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಮಾರಾಟ ಹಾಗೂ ಸೇವೆಯನ್ನು ನೀಡುತ್ತಿದ್ದರೂ ಕಂಪನಿಯ ಮಾನದಂಡಕ್ಕೆ ಪೂರಕವಾದ ಸ್ವಂತ ಮಳಿಗೆ ದೇಶದಲ್ಲಿ ಹೊಂದರಲಿಲ್ಲ. ಇದೀಗ ಭಾರತದಲ್ಲಿ ಪ್ರಾರಂಭವಾಗುತ್ತಿರುವ ಆ್ಯಪಲ್ ಸ್ಟೋರ್‌ಗಳಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಬಿಸಿಲಿನ ಎಫೆಕ್ಟ್‌ನಿಂದ ಹಳಿಯ ರಬ್ಬರ್‌ಗೆ ಬೆಂಕಿ – 20 ನಿಮಿಷ ಮೆಟ್ರೋ ಸಂಚಾರ ಬಂದ್