ವಾಷಿಂಗ್ಟನ್: ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ತಾತ್ಕಾಲಿಕ. ಶೀಘ್ರ ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ತಾತ್ಕಾಲಿಕ. ಸರಕು ಮತ್ತು ಸೇವಾ(ಜಿಎಸ್‍ಟಿ) ಅನುಷ್ಠಾನಕ್ಕೆ ತಂದ ಕಾರಣ ಜಿಡಿಪಿ ಕುಸಿತವಾಗಿದೆ. ಇದು ಕೆಲವೇ ತಿಂಗಳಲ್ಲಿ ಸರಿಯಾಗಲಿರುವ ಸಮಸ್ಯೆ ಎಂದು ಉತ್ತರಿಸಿದರು.
Advertisement
ಭಾರತದ ಆರ್ಥಿಕ ಹಿನ್ನಡೆಗೆ ಜಿಎಸ್‍ಟಿ ಮತ್ತು ನೋಟು ರದ್ದತಿ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆಯ ಪ್ರಶ್ನೆಗೆ, ಭಾರತೀಯ ಆರ್ಥಿಕತೆಯ ಮೇಲೆ ಕೆಲವೇ ದಿನಗಳಲ್ಲಿ ಜಿಎಸ್‍ಟಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
Advertisement
ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಭಾರತದ ಅಭಿವೃದ್ಧಿಗೆ ಬೆಂಬಲ ನೀಡಲಾಗುವುದು. ಅಭಿವೃದ್ಧಿಯತ್ತ ನಡೆಯುತ್ತಿರುವ ರಾಷ್ಟ್ರಗಳು ಹಿಂದೆ ಬೀಳಬಾರದು. ದೇಶದ ಜನರು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರಬೇಕು. ನೈಸರ್ಗಿಕ ವಿಕೋಪ, ವಾತಾವರಣ ಬದಲಾವಣೆ ಇನ್ನಿತ್ಯಾದಿಗಳಿಂದ ಚೇತರಿಸಿಕೊಂಡು ಪ್ರಗತಿಯನ್ನ ಕಾಣಬೇಕು ಎಂದು ಕಿಮ್ ಸಲಹೆ ನೀಡಿದರು.
Advertisement
ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವೈಯಕ್ತಿಕವಾಗಿ ತಿಳಿದಿದೆ. ಮೋದಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರ ತರುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರ ಸೇರಿದಂತೆ ಹಲವು ಸವಾಲುಗಳು ಭಾರತದಲ್ಲಿದೆ ಎಂದರು.
Advertisement
ವಿಶ್ವಬ್ಯಾಂಕ್ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡುವಲ್ಲಿ ಯಶಸ್ವಿಯಾಗಿದೆ. ತಂತ್ರಜ್ಞಾನದಿಂದಲೂ, ಹಣಕಾಸಿನಿಂದಲೂ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಸಹಾಯ ಮಾಡುತ್ತಿದೆ. ಅಂತೆಯೇ ಭಾರತಕ್ಕೂ ವಿವಿಧ ಹಂತಗಳಲ್ಲಿ ಸಹಾಯ ಮಾಡಲು ಸಿದ್ದವಿದೆ. ಮೋದಿ ಹಾಗೂ ಭಾರತದ ಬೆನ್ನೆಲುಬಾಗಿ ವಿಶ್ವಬ್ಯಾಂಕ್ ನಿಲ್ಲಲಿದೆ ಎಂದು ಭರವಸೆ ನೀಡಿದರು.