ಮೊದಲ ಬಾರಿಗೆ ಗಡಿ ದಾಟಿದ 21,000 ಕೋಟಿ ರೂ. ರಕ್ಷಣಾ ರಫ್ತು

Public TV
1 Min Read
Rajnath Singh

– ಮಹತ್ವದ ಬೆಳವಣೆಗೆ ಎಂದ ರಾಜನಾಥ್ ಸಿಂಗ್

ನವದೆಹಲಿ: ದೇಶದ ರಕ್ಷಣಾ ರಫ್ತು (Indian Defence Exports) ಅಭೂತಪೂರ್ವ ಎತ್ತರಕ್ಕೆ ಏರಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 21,000 ಕೋಟಿ ರೂ. ರಕ್ಷಣಾ ರಫ್ತು ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ತಿಳಿಸಿದ್ದಾರೆ.

2023-24ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು 21,083 ಕೋಟಿಗೆ ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿಗೆಯಾಗಿದೆ. ಈ ವಿಚಾರವನ್ನು ಭಾರತದ ಜನರಿಗೆ ತಿಳಿಸಲು ಸಂತೋಷವಾಗುತ್ತಿದೆ ಎಂದು ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

ಮೇ, 2023 ರಲ್ಲಿ ನೈಜೀರಿಯಾದಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದದ ಸಮಯದಲ್ಲಿ, ರಕ್ಷಣಾ ಸಚಿವರು ಆತ್ಮನಿರ್ಭರ್ ಭಾರತ್ (Aatmanirbharta) ಮತ್ತು ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ರಫ್ತು ಮಹತ್ವದ ಪ್ರಗತಿಯ ಗುರಿಯನ್ನು ಸಾಧಿಸುವ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಮೇಕ್ ಇನ್ ಇಂಡಿಯಾ‌ (Make in India), ಮೇಕ್ ಫಾರ್‌ ವರ್ಲ್ಡ್ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: ಮಹಿಳೆಗೆ ಅವಾಚ್ಯ ಪದ ಬಳಕೆ ಆರೋಪ: ನಟ ಶಿವರಾಜ್ ಕೆ.ಆರ್ ಪೇಟೆ ವಿರುದ್ಧ ದೂರು

Share This Article