ನವದೆಹಲಿ: ಭಾರತದ 25 ಅತ್ಯಂತ ಸ್ಚಚ್ಛ ನಗರಗಳ ಪಟ್ಟಿಯನ್ನು ಇಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪ್ರಕಟಿಸಿದ್ದಾರೆ. ಸ್ವಚ್ಛ್ ಸರ್ವೇಕ್ಷಣ್-2017ರ ಭಾಗವಾಗಿ ಸ್ವಚ್ಛ ನಗರಗಳನ್ನ ಪಟ್ಟಿ ಮಾಡಲಾಗಿದ್ದು, 73 ನಗರಗಳಿಂದ ಸುಮರು 37 ಲಕ್ಷ ಮಂದಿ ಇದಕ್ಕೆ ಓಟ್ ಮಾಡಿದ್ದಾರೆ.
ಈ ಬಾರಿ ಮಧ್ಯಪ್ರದೇಶದ ಇಂದೋರ್ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನ ಕೂಡ ಇದೇ ರಾಜ್ಯದ ಭೋಪಾಲ್ ನಗರಕ್ಕೆ ಸಿಕ್ಕಿದೆ. ಇನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ ಮೂರನೇ ಸ್ಥಾನದಲ್ಲಿದೆ. ಗುಜರಾತ್‍ನ ಸೂರತ್ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ 5 ನೇ ಸ್ಥಾನಕ್ಕೆ ಇಳಿದಿದೆ.
Advertisement
ಟಾಪ್ 10 ಅತ್ಯಂತ ಸ್ವಚ್ಛ ನಗರಗಳು:
1. ಇಂದೋರ್- ಮಧ್ಯಪ್ರದೇಶ
2. ಭೋಪಾಲ್- ಮಧ್ಯಪ್ರದೇಶ
3. ವಿಶಾಖಪಟ್ಟಣ – ಆಂಧ್ರಪ್ರದೇಶ
4. ಸೂರತ್ – ಗುಜರಾತ್
5. ಮೈಸೂರು – ಕರ್ನಾಟಕ
6. ತಿರುಚಿರಾಪಳ್ಳಿ – ತಮಿಳುನಾಡು
7. ನವದೆಹಲಿ ಪುರಸಭೆ
8. ನವೀ ಮುಂಬೈ – ಮಹಾರಾಷ್ಟ್ರ
9. ತಿರುಪತಿ – ಆಂಧ್ರಪ್ರದೇಶ
10. ವಡೋದರಾ – ಗುಜರಾತ್
Advertisement
#Mysuru rounds up the Top 5 cleanest cities in India at #SwachhSurvekshan2017 awards.
Congratulations Mysuru! pic.twitter.com/8ZOaeaDrEW
— Swachh Bharat Urban (@SwachhBharatGov) May 4, 2017
Advertisement
#Mysuru gets felicitated for ranking 5th during the #SwachhSurvekshan2017 Awards. pic.twitter.com/0pGkW7eJ4X
— Swachh Bharat Urban (@SwachhBharatGov) May 4, 2017
Advertisement
ಅತ್ಯಂತ ಸ್ಚಚ್ಛ ನಗರಗಳ ಪಟ್ಟಿ ಮಾಡಲು ನಡೆಸಿದ ಸಮೀಕ್ಷೆಯಲ್ಲಿ ಜನರಿಗೆ ಹಲವು ಪ್ರಶ್ನೆಗಳ ಮೇಲೆ ಓಟ್ ಮಾಡಲು ಕೇಳಲಾಗಿತ್ತು. ಸರ್ಕಾರದ ಮಾಹಿತಿಯ ಪ್ರಕಾರ ಜನರು ತಮ್ಮ ನಗರಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸುಧಾರಣೆಯಾಗಿದೆ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಜನರು ನೀಡಿದ ಪ್ರತಿಕ್ರಿಯೆಯ ಜೊತೆಗೆ ಒಂದು ಪ್ರದೇಶದ ಸ್ವಚ್ಛತಾ ಕಾರ್ಯ ಮತ್ತು ನೈರ್ಮಲ್ಯತೆಯ ಬಗ್ಗೆ ಅಲ್ಲಿನ ಸ್ಥಳೀಯ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಸ್ವಚ್ಛ ನಗರಗಳ ಪಟ್ಟಿಯನ್ನ ಸಿದ್ಧಪಡಿಸಲಾಗಿದೆ.
2019ರೊಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಗುರಿಯನ್ನು ಸಕಾರಗೊಳಿಸಲು ತೆಗೆದುಕೊಳ್ಳಲಾಗಿರುವ ಪ್ರಮುಖ ಹೆಜ್ಜೆಗಳಲ್ಲಿ ಈ ಸಮೀಕ್ಷೆಯೂ ಒಂದಾಗಿದೆ. ಬಯಲು ಶೌಚ ಮುಕ್ತವಾಗಲು ಭಾರತಕ್ಕೆ ಸರಿಸುಮಾರು 11.1 ಕೋಟಿ ಶೌಚಾಲಯಗಳ ಅಗತ್ಯವಿದ್ದು, ಈವರೆಗೆ ಸರ್ಕಾರ 3 ಕೋಟಿ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.
Congratulations #Indore on being awarded the Cleanest CIty in India at #SwachhSurvekshan2017. pic.twitter.com/65JbOulqHN
— Swachh Bharat Urban (@SwachhBharatGov) May 4, 2017
#Bhopal awarded the 2nd Cleanest City in India at #SwachhSurvekshan2017.
Congratulations to the citizens for helping Bhopal secure #2. pic.twitter.com/mpHkTbozJL
— Swachh Bharat Urban (@SwachhBharatGov) May 4, 2017
#Vizag completes the Top 3 in this year's #SwachhSurvekshan2017 awards.#SwachhBharat pic.twitter.com/mkkDx5lOS6
— Swachh Bharat Urban (@SwachhBharatGov) May 4, 2017
#Surat is India's 4th Cleanest City at #SwachhSurvekshan2017 Awards.
Congratulations Surat.#SwachhBharat pic.twitter.com/szaPDXoS4P