ಜಕಾರ್ತ: ಇಂಡೋನೇಷ್ಯಾದ ಲಯನ್ಸ್ ಏರ್‌ಲೈನ್ಸ್ ದುರಂತದಲ್ಲಿ ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವ್ಯೆ ಸುನೆಜಾ ಮೃತಪಟ್ಟಿದ್ದಾರೆ.
ದುರಂತ ಸಂಭವಿಸಿದ ಲಯನ್ ಏರ್‌ಲೈನ್ಸ್ ಸಂಸ್ಥೆಯ ಜಿಟಿ610 ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿದ್ದ ಭಾರತದ ಭಾವ್ಯೆ ಸುನೆಜಾ ಅವರು ಮೃತಪಟ್ಟಿರುವುದಾಗಿ ಜಕಾರ್ತದ ಭಾರತೀಯ ರಾಯಭಾರಿ ಕಚೇರಿ ಅಧಿಕೃತವಾಗಿ ತಿಳಿಸಿದೆ.
Advertisement
Our deepest condolences on the tragic loss of lives in the Lion Air Plane crash, off the coast of Jakarta today. Most unfortunate that Indian Pilot Bhavye Suneja who was flying JT610 also lost his life…Embassy is in touch with Crisis Center and coordinating for all assistance. pic.twitter.com/56lbxGSoJe
— India in Indonesia (@IndianEmbJkt) October 29, 2018
Advertisement
ಮಾಹಿತಿಗಳ ಪ್ರಕಾರ ಸುನೆಜಾ 2011 ರಿಂದ ಲಯನ್ ಏರ್‌ಲೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುಂಚೆ ಅವರು ಎಮಿರೇಟ್ಸ್ ವಿಮಾನ ಸಂಸ್ಥೆಯಲ್ಲಿ ತರಬೇತಿ ಪೈಲೆಟ್ ಆಗಿಯೂ ಸೇವೆ ಸಲ್ಲಿಸಿದ್ದರು. ಸುನೆಜಾರವರು ದೆಹಲಿ ಮೂಲದವರಾಗಿದ್ದು, ಪೂರ್ವ ದೆಹಲಿಯ ಮಯೂರ್ ವಿಹಾರ್ ದಲ್ಲಿನ ಅಹಲ್ಕಾನ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ್ದರು.
Advertisement
ಮುಖ್ಯ ಪೈಲಟ್ ಆಗಿದ್ದ ಸುನೆಜಾ ಅವರಿಗೆ 6 ಸಾವಿರ ಗಂಟೆಯ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಇದಲ್ಲದೇ ಇಂಡೋನೇಷ್ಯಾದ ಹಾರ್ವಿನೋದಲ್ಲಿ ಸಹ ಪೈಲಟರ್ ಆಗಿ 5,000 ಕ್ಕೂ ಅಧಿಕ ಗಂಟೆಯ ಅನುಭವವನ್ನು ಸಹ ಹೊಂದಿದ್ದರು ಎನ್ನುವ ಮಾಹಿತಿಯನ್ನು ಲಯನ್ ಏರ್‌ಲೈನ್ಸ್ ಸಂಸ್ಥೆ ತಿಳಿಸಿದೆ.
Advertisement
ಸುನೆಜಾ ಸಾವಿನ ಕುರಿತು ಜಕಾರ್ತ ಭಾರತೀಯ ರಾಯಭಾರಿ ಕಚೇರಿಯು ತನ್ನ ಟ್ವಿಟ್ಟರಿನಲ್ಲಿ, ಜಕಾರ್ತ ಬಳಿ ಲಯನ್ ಏರ್‌ಲೈನ್ಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ಆದರೆ ಘಟನೆಯಲ್ಲಿ ದುರದಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ರಕ್ಷಣಾ ಕೇಂದ್ರದ ಜೊತೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ ಎಂದು ಬರೆದುಕೊಂಡಿದೆ.
#BhavyeSuneja is married to my friends sister ! This is a devastating news for me personally ! #LionJT610 #JT610 #avgeek pic.twitter.com/J2rGA9TjNp
— VT ASH ???? (@thejagjitfan) October 29, 2018
ಏನಿದು ವಿಮಾನ ದುರಂತ?
ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.
Kurz nach dem Start in #Jakarta stürzt ein indonesisches Flugzeug ins Meer. #LionAircrash pic.twitter.com/Mdz7INXS8X
— ZDFheute (@ZDFheute) October 29, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv