-ಆಡಿಲೇಡ್‍ನಲ್ಲಿ 15 ವರ್ಷದ ಬಳಿಕ ಸ್ಮರಣೀಯ ಗೆಲುವು
ಅಡಿಲೇಡ್: ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 10 ವರ್ಷದ ಬಳಿಕ ಮೊದಲ ಗೆಲುವು ಪಡೆದುಕೊಂಡಿದೆ. ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 31 ರನ್‍ಗಳ ಜಯದ ಮಾಲೆ ಟೀಂ ಇಂಡಿಯಾ ಕೊರಳಿಗೆ ದಕ್ಕಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಆಸೀಸ್ ನೆಲದಲ್ಲಿ 10 ವರ್ಷಗಳ ಬಳಿಕ ಭಾರತದ ಕ್ರಿಕೆಟ್ ತಂಡ ಗೆಲುವು ಸಾಧಿಸಿದೆ.
ಅಂತಿಮ ದಿನದಲ್ಲಿ ಆಸೀಸ್ ತನ್ನ ಆರು ವಿಕೆಟ್ ಗಳ ಜೊತೆ ಅಂಗಳಕ್ಕೆ ಇಳಿದಿತ್ತು. ಭಾರತದ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಬೆಚ್ಚಿದ ಆಸೀಸ್ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ತಲಾ 3 ವಿಕೆಟ್, ರವಿಚಂದ್ರನ್ ಅಶ್ವಿನ್ 2, ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು. ಅಂತಿಮ ದಿನದಾಟ ಆರಂಭಿಸಿದ ಆಸೀಸ್ ಪಡೆಗೆ ಆರಂಭದಲ್ಲಿಯೇ ಇಶಾಂತ್ ಶರ್ಮಾ ಆಘಾತ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ ಟ್ರಾವಿಸ್ ಹೆಡ್ (14) ಹೆಚ್ಚು ಸಮಯ ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.
Advertisement
History repeats itself!
In the 2003 Adelaide Test, No. 3 Rahul Dravid won the Player of the Match.
In 2018, No. 3 @cheteshwar1 is named Player of the Match. #TeamIndia pic.twitter.com/LOnRQNbXyo
— BCCI (@BCCI) December 10, 2018
Advertisement
ಶಾನ್ ಮಾರ್ಶ್ ಆಕರ್ಷಕ ಅರ್ಧಶತಕದೊಂದಿಗೆ ಆಸೀಸ್ ತನ್ನ ಹೋರಾಟವನ್ನು ಮುಂದುವರೆಸಿತ್ತು. ಈ ವೇಳೆ ಸ್ಥಿರವಾಗಿದ್ದ ಮಾರ್ಶ್ ವಿಕೆಟ್ ಪಡೆದ ಬುಮ್ರಾ ಆಸೀಸ್ ಗೆ ಮತ್ತೊಂದು ಹೊಡೆತ ನೀಡಿದರು. 116 ಎಸೆತಗಳಲ್ಲಿ ಮಾರ್ಶ್ ಐದು ಬೌಂಡರಿಗಳಿಂದ 60 ರನ್ ಗಳಿಸಿದರು.
Advertisement
ಪೈನ್ 73 ಎಸೆತದಲ್ಲಿ 41 ರನ್, ಮೆಚೆಲ್ ಸ್ಟಾರ್ಕ್ 33 ಎಸೆತಗಳಲ್ಲಿ 28 ರನ್, ಪ್ಯಾಕ್ ಕಮ್ಮಿನ್ 121 ಎಸೆತದಲ್ಲಿ 28 ರನ್ ಕಲೆ ಹಾಕಿದರು. ಭಾರತ ತಂಡ ನೀಡಿದ್ದ 323 ರನ್ ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 119.5 ಓವರ್ ಗಳಲ್ಲಿ 291 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
Advertisement
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ – 250/10, 88 ಓವರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 235/10, 98.4 ಓವರ್
ಭಾರತ ಎರಡನೇ ಇನ್ನಿಂಗ್ಸ್ – 307/10, 106.5 ಓವರ್
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ – 291/10, 119.5 ಓವರ್
THAT IS IT! #TeamIndia has done it! Another glorious chapter added to our love affair with Adelaide. Got close in the end, but India win by 31 runs and lead the series 1-0 #AUSvIND pic.twitter.com/hmW1Lla2q8
— BCCI (@BCCI) December 10, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv