ಲಂಡನ್: ಭಾರತೀಯರು 2 ಡೋಸ್ ಕೊರೊನಾ (vaccine)ಲಸಿಕೆ ಪಡೆದು ಬ್ರಿಟನ್ ಪ್ರಯಾಣಿಸಿದರೂ ಅವರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ನಿಯಮವನ್ನು ಬ್ರಿಟನ್ ಜಾರಿಗೊಳಿಸಿದೆ.
ಭಾರತದಿಂದ ಲಸಿಕೆ ಪಡೆದು ಹೋದವರು ಟ್ರಿಟನ್‍ನಲ್ಲಿ 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗಿದೆ. ಬ್ರಿಟನ್ (Oxford AstraZeneca) ಆಕ್ಸ್‌ಫರ್ಡ್- ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಪಡಿಸಿರುವ ಕೋವಿಶೀಲ್ಡ್ ಲಸಿಕೆ (Covishield vaccine)ಯನ್ನು ತೆಗೆದುಕೊಂಡಿದ್ದರೂ ಭಾರತೀಯರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ಬ್ರಿಟಿಷ್ ಸರ್ಕಾರದ ನಿಮಯ ವ್ಯಾಪಕ ಟೀಕೆಗೆ ಗುರಿಯಾಗಿದೆ.
Advertisement
Because of this I have pulled out of a debate at the @cambridgeunion &out of launch events for the UK edition of my book #TheBattleOfBelonging (published there as #TheStruggleForIndiasSoul). It is offensive to ask fully vaccinated Indians to quarantine. The Brits are reviewing! https://t.co/YEVy3Ez5dj
— Shashi Tharoor (@ShashiTharoor) September 20, 2021
ಸದ್ಯ ಬ್ರಿಟನ್‍ನಲ್ಲಿ ಹಳದಿ ಹಸಿರು ಹಾಗೂ ಕೆಂಪು ದೇಶಗಳು ಎಂದು ವಿದೇಶಗಳನ್ನು ಕೋವಿಡ್ ಸುರಕ್ಷತೆ ದೃಷ್ಟಿಯಿಂದ ಪಟ್ಟಿಯನ್ನು ಮಾಡಲಾಗಿದೆ. ಅದರಲ್ಲಿ ಹಳದಿ ಪಟ್ಟಿಯಲ್ಲಿ ಭಾರತವಿದೆ. ಈಗ ಅ.4ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೊಳಿಸಲಾಗಿದ್ದು, ಅದರಲ್ಲಿ ಹಳದಿ, ಹಸಿರು ಪಟ್ಟಿ ರದ್ದುಪಡಿಸಿ, ಎಲ್ಲಾ ದೇಶಗಳನ್ನೂ ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಇದನ್ನೂ ಓದಿ: ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ
Advertisement
Advertisement
ಭಾರತ, ಆಫ್ರಿಕಾ, ದಕ್ಷಿಣ ಆಫ್ರಿಕಾ, ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್, ರಷ್ಯಾ ಇದರಲ್ಲಿ ಈ ದೇಶದ ಜನ 2 ಡೋಸ್ ಲಸಿಕೆ ಪಡೆದು ಬ್ರಿಟನ್ನಿಗೆ ತೆರಳಿದರೂ 10 ದಿನ ಕ್ವಾಂಟೈನ್ ಕಡ್ಡಾಯ ಮಾಡಲಾಗಿದೆ.
Advertisement