ವಾಷಿಂಗ್ಟನ್: ಭಾರತೀಯರು ಕೆಟ್ಟವರು ಎಂದು ಹೇಳಿ ಅಮೆರಿಕ (America) ವ್ಯಕ್ತಿಯೊಬ್ಬ ಭಾರತ ಮೂಲದ ನರ್ಸ್ (Nurse) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಾಮ್ ಬೀಚ್ ಕೌಂಟಿ ಆಸ್ಪತ್ರೆಯಲ್ಲಿ ನಡೆದಿದೆ.
ಭಾರತ ಮೂಲದ ಲೀಲಮ್ಮ ಲಾಲ್(67) ಹಲ್ಲೆಗೊಳಗಾದ ನರ್ಸ್. ಸ್ಟೀಫನ್ ಸ್ಕ್ಯಾಂಟಲ್‌ಬರಿ(33) ಹಲ್ಲೆ ಮಾಡಿರುವ ಆರೋಪಿ.
ಹೆಚ್‌ಸಿಎ ಫ್ಲೋರಿಡಾ ಪಾಮ್ಸ್ ವೆಸ್ಟ್ ಆಸ್ಪತ್ರೆಯಲ್ಲಿ ಮನೋ ರೋಗಿಯಾಗಿದ್ದ ಸ್ಕ್ಯಾಂಟಲ್‌ಬರಿ ಮಾ.4 ರಂದು ಲೀಲಮ್ಮ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾದ ಲೀಲಮ್ಮ ಅವರ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಭುಜದ ಮೂಳೆಗಳು ಮುರಿದಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. 2 ನಿಮಿಷಗಳವರೆಗೆ ನಡೆದ ಹಲ್ಲೆಯ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆ ಮಾಡುತ್ತಿದ್ದೇವೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಪ್ರಮೀಳಾ ಜೋಷಾಯ್ ಹುಟ್ಟುಹಬ್ಬದಲ್ಲಿ ಸ್ಯಾಂಡಲ್‌ವುಡ್ ನಟಿಯರು
ಹಲ್ಲೆಯ ಬಗ್ಗೆ ಲೀಲಮ್ಮ ಅವರ ಮಗಳು ಸಿಂಡಿ ಜೋಸೆಫ್ ಪ್ರತಿಕ್ರಿಯಿಸಿ. ಹಲ್ಲೆ ತೀವ್ರತೆಗೆ ಅಮ್ಮನ ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಆಕೆಯ ಮುಖದ ಬಲಭಾಗಕ್ಕೆ ಗಂಭೀರ ಗಾಯಗಳಾಗಿವೆ. ಕಣ್ಣಿನ ಭಾಗಕ್ಕೂ ಬಲವಾಗಿ ಪೆಟ್ಟು ಬಿದ್ದಿದ್ದು, ಕಣ್ಣುಗಳು ಊದಿಕೊಂಡಿದೆ. ಮೊದಲು ನನಗೆ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋತ ಬೆನ್ನಲ್ಲೇ ಏಕದಿನ ಕ್ರಿಕೆಟ್‌ಗೆ ಸ್ಟೀವ್ ಸ್ಮಿತ್ ನಿವೃತ್ತಿ
ಹಲ್ಲೆಯ ಬಳಿಕ ಆರೋಪಿ ಸ್ಕ್ಯಾಂಟಲ್‌ಬರಿ `ಭಾರತೀಯರು ಕೆಟ್ಟವರು’ ಮತ್ತು `ನಾನು ಭಾರತೀಯ ವೈದ್ಯರ ಬಗ್ಗೆ ವಿವರವಾಗಿ ಹೇಳಿದ್ದೇನೆ’ ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಕುರಿತು ಆಸ್ಪತ್ರೆಯ ವೈದ್ಯರೊಬ್ಬರು ಪೊಲೀಸರಿಗೆ ಸಾಕ್ಷಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಸಿಎಂ ಯೋಗ – ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಸ್ಫೋಟಕ ಭವಿಷ್ಯ
ಸ್ಕ್ಯಾಂಟಲ್‌ಬರಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ವರ್ಗಾಯಿಸುವಂತೆ ಕೋರಿ ಸ್ಕ್ಯಾಂಟಲ್‌ಬರಿ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಧೀಶರು ನಿರಾಕರಿಸಿದರು. ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್ ಸವಾರರಿಗೆ ನೋ ಎಂಟ್ರಿ!
ದಕ್ಷಿಣ ಫ್ಲೋರಿಡಾದ ಭಾರತೀಯ ದಾದಿಯರ ಸಂಘದ ಸಲಹಾ ಮಂಡಳಿಯ ಅಧ್ಯಕ್ಷೆ ಡಾ. ಮಂಜು ಸ್ಯಾಮ್ಯುಯೆಲ್, ಘಟನೆಯ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು, ಆರೋಗ್ಯ ಸಿಬ್ಬಂದಿಯನ್ನು ರಕ್ಷಿಸಲು ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಖತ್ ಡ್ಯಾನ್ಸ್- ‘ಸಿಕಂದರ್’ ಸಾಂಗ್ ಔಟ್
ಲೀಲಮ್ಮ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.