ನವದೆಹಲಿ: ವಿಶ್ವಕಪ್ ಟೂರ್ನಿಯ ಭಾಗವಾಗಿ ನಾಳೆ ನಡೆಯಲಿರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಭಾರೀ ಕುತೂಹಲವನ್ನು ಮೂಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪಂದ್ಯದ ಕುರಿತ ಹೊಸ ಹೊಸ ಮಿಮ್ಸ್ ಹರಿದಾಡುತ್ತಿದ್ದು, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಜಾಹೀರಾತಿಗೆ ಭಾರತದ ಯೂಟ್ಯೂಬ್ ಸ್ಟಾರ್ಸ್ ತಿರುಗೇಟು ನೀಡಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.
Awesome reply by India……#INDvsPAK pic.twitter.com/TybSKAVJg9
— Harsh Goenka (@hvgoenka) June 14, 2019
ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಹೋಲುವಂತಹ ವ್ಯಕ್ತಿಯನ್ನು ಜಾಹೀರಾತಿನಲ್ಲಿ ಬಳಕೆ ಮಾಡಿದ್ದ ಪಾಕ್ ಮಾಧ್ಯಮ ವಿರುದ್ಧ ಭಾರತೀಯ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸದ್ಯ ವಿ ಸೆವೆನ್ ಪಿಕ್ಚರ್ಸ್ ಎಂಬ ಯೂಟ್ಯೂಬ್ ಚಾನೆಲ್ ವಿಡಿಯೋ ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಭಾರತೀಯ ಅಭಿಮಾನಿ ಸಲೂನ್‍ನಲ್ಲಿ ಯುವರಾಜ್ ಸಿಂಗ್ ವಿಡಿಯೋ ನೋಡತ್ತಾ ಕುಳಿತ್ತಿರುತ್ತಾರೆ. ಈ ವೇಳೆ ಆಗಮಿಸುವ ಪಾಕ್ ಅಭಿಮಾನಿ ಗಿಫ್ಟ್ ಎಂದು ರುಮಾಲ್ (ಕರ್ಚಿಫ್)ನ್ನು ನೀಡಿ ಜೂನ್ 16 ರಂದು ಪಾಕ್ ಗೆಲ್ಲುವ ಬಳಿಕ ನಿಮಗೆ ಬೇಕಾಗುತ್ತದೆ ಎಂದು ಕಾಲೆಳೆಯುತ್ತಾರೆ. ಇದಕ್ಕೆ ಸೈಲೆಂಟ್ ಆಗಿಯೇ ತಿರುಗೇಟು ನೀಡುವ ಭಾರತೀಯ ಅಭಿಮಾನಿ ಅಭಿನಂದನ್ ರೀತಿಯೇ ಪಾಕ್ ಅಭಿಮಾನಿಗೆ ಶೇವ್ ಮಾಡಿಸುತ್ತಾನೆ. ಪಾಕ್ ಅಭಿಮಾನಿ ನೀಡಿದ್ದ ಕರ್ಚಿಫ್ ಗಿಫ್ಟನ್ನು ಆತನಿಗೆ ಮರಳಿ ನೀಡಿರುವ ಭಾರತೀಯ ಅಭಿಮಾನಿ, ನಿಮ್ಮಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಅಭಿನಂದನ್ ಕುಡಿದು ಬಿಟ್ಟ ಟೀ ಕಪ್ ಪಡೆಯಲು ಮಾತ್ರ ಸಾಧ್ಯ ಎಂದು ಹೇಳಿ ಟಾಂಗ್ ನೀಡುತ್ತಾನೆ.
Shameful for Pakistan to mock our hero #Abhinandan ahead of #INDvsPAK World Cup cricket game. We need to retaliate! pic.twitter.com/BQcLxyQPvH
— Harsh Goenka (@hvgoenka) June 11, 2019
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮದೇ ಪ್ರತಿಕ್ರಿಯೆ ನೀಡಿ ಉತ್ತರಿಸುತ್ತಿದ್ದಾರೆ. ವಿಡಿಯೋ ಅಂತ್ಯದಲ್ಲಿ ಸಿಗುವ ಟ್ವಿಸ್ಟ್ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.