ವಾಷಿಂಗ್ಟನ್: ಭಾರತದ ಯುವಕರಿಬ್ಬರು ಅಮೆರಿಕದ ನ್ಯೂಜೆರ್ಸಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಮಿತ್ ಹಾಗೂ ಆದಿತ್ಯ ಮದುವೆಯಾದ ಯುವಕರು. ಅಮಿತ್ ಹಾಗೂ ಆದಿತ್ಯ ಮನೆಯವರ ಒಪ್ಪಿಗೆ ಪಡೆದು ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಲಿಂಗಿ ಮದುವೆ ಆಗಿದ್ದಾರೆ. ಅಮಿತ್ ಹಾಗೂ ಆದಿತ್ಯ ತಮ್ಮ ಮೊದಲ ಭೇಟಿಯಲ್ಲೇ ಒಬ್ಬರನೊಬ್ಬರು ಫೋನ್ ನಂಬರ್ ಪಡೆದು ಒಳ್ಳೆಯ ಗೆಳೆಯರಾಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
Advertisement
ತಮ್ಮ ಸಂಬಂಧದ ಬಗ್ಗೆ ಅಮಿತ್ ಹಾಗೂ ಆದಿತ್ಯ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ನಾವು ಪರಸ್ಪರ ಡೇಟ್ ಮಾಡುತ್ತಿದ್ದಾಗ ಮುಂದೆ ನಾವಿಬ್ಬರು ಮದುವೆ ಆಗುತ್ತೇವೆ ಎಂದುಕೊಂಡಿರಲಿಲ್ಲ. ಬಳಿಕ ಒಟ್ಟಿಗೆ ಕಾಲ ಕಳೆಯುತ್ತಿದ್ದಾಗ ನಾವು ಒಬ್ಬರಿಗೊಬ್ಬರು ಹುಟ್ಟಿದ್ದೇವೆ ಎಂದು ಅನಿಸುತ್ತಿತ್ತು. ಆಗ ನಾವು ನಮ್ಮ ಪೋಷಕರ ಬಳಿ ಹೋಗಿ ನಾವಿಬ್ಬರು ಮದುವೆಯಾಗುವುದಾಗಿ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದೇವು ಎಂದು ಹೇಳಿದ್ದಾರೆ.
Advertisement
Advertisement
3 ವರ್ಷ ಡೇಟಿಂಗ್ ನಡೆಸಿದ ನಂತರ ಅಮಿತ್ ಹಾಗೂ ಆದಿತ್ಯ ಮದುವೆಯಾಗಿದ್ದಾರೆ. ಇವರ ಮದುವೆಗೆ ಟ್ವಿಟ್ಟರಿನಲ್ಲಿ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಶುಭಾಶಯ ಕೋರಿದ್ದಾರೆ. ಹರೀಶ್ ಅಯ್ಯರ್ ಎಂಬವರು ಟ್ವಿಟ್ಟರಿನಲ್ಲಿ ಅಮಿತ್ ಹಾಗೂ ಆದಿತ್ಯಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ “ಅವರು ಸಲಿಂಗ ಮದುವೆ ಆಗಿಲ್ಲ, ಅವರು ಮದುವೆ ಆಗಿದ್ದಾರೆ ಎಂಬ ವಿಷಯ ಒಂದು ದಿನ ಎಲ್ಲರಿಗೂ ಅರ್ಥವಾಗುತ್ತದೆ” ಎಂದು ಕಮೆಂಟ್ ಮಾಡಿದ್ದಾರೆ.
ಒಬ್ಬರು ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಅಲ್ಲದೆ ಮದುವೆ ಮೊದಲು ಇಬ್ಬರು ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಇವರಿಬ್ಬರ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರ ಕೂಡ ನಡೆದಿದ್ದು, ಆ ಫೋಟೋಗಳು ಕೂಡ ವೈರಲ್ ಆಗುತ್ತಿದೆ. ಆದಿತ್ಯ ತುಂಬಾ ಕ್ರಿಯೇಟಿವ್ ಆಗಿದ್ದು, ಪೇಟಿಂಗ್ ನಲ್ಲಿ ಸಾಕಷ್ಟು ಒಲವಿದೆ ಎಂದು ಅಮಿತ್ ತಿಳಿಸಿದ್ದಾರೆ.