ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡಿನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಟರ್ ನ್ಯಾಷನಲ್ ಸ್ಫೋರ್ಟ್ಸ್ ಫೆಡರೇಶನ್ (IBSA) ವರ್ಲ್ಡ್‌ಗೇಮ್ಸ್‌ನ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ (IBSA World Games) ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆಸ್ಟ್ರೇಲಿಯಾ ಮಹಿಳಾ ಅಂಧರ ಕ್ರಿಕೆಟ್ ತಂಡದ (Australia Womens Team) ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ. ಇದನ್ನೂ ಓದಿ: World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
History made at @Edgbaston! India are our first ever cricket winners at the IBSA World Games!
Australia VI Women 114/8
India VI Women 43/1 (3.3/9)
India VI Women win by 9 wickets.
???? Will Cheshire pic.twitter.com/1Iqx1N1OCW
— IBSA World Games 2023 (@IBSAGames2023) August 26, 2023
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ VI ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತ್ತು. 115 ರನ್ ಗಳ ಗುರಿ ಬೆನ್ನತ್ತಿದ್ದ ಭಾರತ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತ್ತು. ಆರಂಭಿಕರಾದ ದೀಪಿಕಾ 11 ಎಸೆತಗಳಲ್ಲಿ 18 ರನ್ ಗಳಿಸಿದರೆ, ನೀಲಪ್ಪ 8 ರನ್ ಗಳಿಸಿ ಔಟಾದರು, ಈ ವೇಳೆ ಮಳೆ ಅಡ್ಡಿಯಾಯಿತು. ಇದನ್ನೂ ಓದಿ: ಲೆಯೊನೆಲ್ ಮೆಸ್ಸಿ ಭದ್ರತೆಗೆ ಹೊಸ ಬಾಡಿಗಾರ್ಡ್ ನೇಮಕ – ಯಾಸಿನ್ ಚುಯೆಕೊ ಯಾರು ಗೊತ್ತಾ?
ಭಾರತ ತಂಡಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಪಂದ್ಯವನ್ನ 9 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಭಾರತ ತಂಡಕ್ಕೆ 9 ಓವರ್‌ಗಳಲ್ಲಿ 43 ರನ್‌ಗಳ ಗುರಿ ನೀಡಲಾಯಿತು. ಆದ್ರೆ ಭಾರತದ ವನಿತೆಯರು ಕೇವಲ 3.3 ಓವರ್‌ಗಳಲ್ಲೇ 1 ವಿಕೆಟ್ ನಷ್ಟಕ್ಕೆ 43 ರನ್ ಚಚ್ಚಿ ಗೆಲುವು ಕೈವಶ ಮಾಡಿಕೊಂಡರು.
ಈ ಮೂಲಕ ಇಂಟರ್ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (ಐಬಿಎಸ್‌ಎ) ವರ್ಲ್ಡ್ ಗೇಮ್ಸ್ನ ಅಂಧರ ಕ್ರಿಕೆಟ್ನಲ್ಲಿ ಭಾರತ ಮಹಿಳಾ ತಂಡವು ಐತಿಹಾಸಿಕ ಸಾಧನೆ ಮಾಡಿತು. ಕಳೆದ ವಾರ ಆರಂಭಗೊಂಡಿದ್ದ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.
Web Stories