ಪಾಕ್‌ನಲ್ಲಿ ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ.. ಅವರನ್ನು ಬಿಟ್ಟು ತವರಿಗೆ ಹೋಗಲ್ಲ: ಭಾರತದ ಮಹಿಳೆ ಅಳಲು

Public TV
1 Min Read
indian women

ಇಸ್ಲಾಮಾಬಾದ್: ಮಕ್ಕಳನ್ನು ಪಾಕಿಸ್ತಾನದಲ್ಲಿ (Pakistan) ಅಪಾಯವಿದೆ. ಅವರನ್ನು ಬಿಟ್ಟು ನಾನು ಪಾಕಿಸ್ತಾನ ತೊರೆಯುವುದಿಲ್ಲ ಎಂದು ಭಾರತದ ಮಹಿಳೆಯೊಬ್ಬರು (Indian Women) ಅಳಲು ತೋಡಿಕೊಂಡಿದ್ದಾರೆ.

ಮುಂಬೈ ಮೂಲದ ಭಾರತೀಯ ಪ್ರಜೆ ಫರ್ಜಾನಾ ಬೇಗಂ ಎಂಬ ಮಹಿಳೆ ಪಾಕಿಸ್ತಾನದಲ್ಲಿ ತನ್ನ ಮಕ್ಕಳ ಪಾಲನೆಗಾಗಿ ಹೋರಾಡುತ್ತಿದ್ದಾರೆ. ತನ್ನ ಮಕ್ಕಳ ಜೀವಕ್ಕೆ ಅಪಾಯವಿದ್ದು, ಅವರನ್ನು ಅಲ್ಲಿಯೇ ಬಿಟ್ಟು ತಾಯ್ನಾಡು ಭಾರತಕ್ಕೆ ವಾಪಸ್‌ ಆಗಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಮರುಭೂಮಿ ದೇಶ ದುಬೈನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ವಿಮಾನ ನಿಲ್ದಾಣ

india pakistan

ಫರ್ಜಾನಾ ಬೇಗಂ ಅವರು ಪಾಕಿಸ್ತಾನಿ ಪ್ರಜೆ ಮಿರ್ಜಾ ಮುಬಿನ್ ಇಲಾಹಿ ಅವರನ್ನು ಅಬುಧಾಬಿಯಲ್ಲಿ 2015 ರಲ್ಲಿ ವಿವಾಹವಾದರು. 2018 ರಲ್ಲಿ ಪಾಕಿಸ್ತಾನಕ್ಕೆ ಬಂದರು. ಈ ದಂಪತಿಗೆ ಏಳು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.

ಫರ್ಜಾನಾ ಅವರ ಪುತ್ರರ ಹೆಸರಿನಲ್ಲಿದ್ದ ಆಸ್ತಿ ವಿಚಾರದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಪತಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಫರ್ಜಾನಾ ಆರೋಪ ಮಾಡಿದ್ದಾರೆ. ವಿಚ್ಛೇದನ ನೀಡಿದ್ದೇನೆಂಬ ಪತಿಯ ಆರೋಪವನ್ನು ಅಲ್ಲಗಳೆದಿದ್ದಾರೆ. ‘ಆತ ನನಗೆ ವಿಚ್ಛೇದನ ನೀಡಿದ್ದರೆ, ಪ್ರಮಾಣ ಪತ್ರ ಇರಬೇಕು’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಮಾನ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ- 13 ಮಂದಿ ದುರ್ಮರಣ

ಪಾಕಿಸ್ತಾನದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ. ನಾನು ಲಾಹೋರ್‌ನ ರೆಹಮಾನ್ ಗಾರ್ಡನ್ಸ್‌ನಲ್ಲಿರುವ ನನ್ನ ಮನೆಗಷ್ಟೇ ಸೀಮಿತವಾಗಿದ್ದೇನೆ. ನನ್ನ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಕರಣ ಇತ್ಯರ್ಥವಾಗುವವರೆಗೆ ತನಗೆ ರಕ್ಷಣೆ ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಫರ್ಜಾನಾ ಮನವಿ ಮಾಡಿದ್ದು, ಪುತ್ರರಿಲ್ಲದೆ ತನ್ನ ತಾಯ್ನಾಡಿಗೆ ತೆರಳಲು ನಿರಾಕರಿಸಿದ್ದಾಳೆ. ಲಾಹೋರ್‌ನಲ್ಲಿ ನನ್ನ ಪುತ್ರರ ಹೆಸರಿನಲ್ಲಿ ಕೆಲವು ಆಸ್ತಿಗಳಿವೆ. ಮಕ್ಕಳು ಮತ್ತು ನನ್ನ ಪಾಸ್‌ಪೋರ್ಟ್‌ ಪತಿ ಬಳಿಯಿವೆ ಎಂದು ತಿಳಿಸಿದ್ದಾರೆ.

Share This Article