– ವಾಶ್‌ರೂಂಗೆ ಹೋಗುವುದಕ್ಕೂ ಅವಕಾಶ ಕೊಡಲಿಲ್ಲ: ಎಫ್‌ಬಿಐ ವಿರುದ್ಧ ಆರೋಪ
ವಾಷಿಂಗ್ಟನ್: ಭಾರತದ ಯುವ ಉದ್ಯಮಿ ಶೃತಿ ಚತುರ್ವೇದಿಗೆ ಅಮೆರಿಕಾದಲ್ಲಿ ಕಹಿ ಅನುಭವ ಆಗಿದೆ. ಅಲಸ್ಕಾ ಏರ್‌ಪೋರ್ಟ್ನಲ್ಲಿ ತಮ್ಮನ್ನು ಎಂಟು ಗಂಟೆ ಅನ್ಯಾಯವಾಗಿ ಎಫ್‌ಬಿಐ ನಿರ್ಬಂಧಿಸಿತ್ತು ಎಂದು ಶೃತಿ ಚತುರ್ವೇದಿ ಆರೋಪಿಸಿದ್ದಾರೆ.
ಹ್ಯಾಂಡ್‌ಬಾಗ್‌ನಲ್ಲಿದ್ದ ಪವರ್‌ಬ್ಯಾಂಕ್ ಅನುಮಾನಾಸ್ಪದವಾಗಿ ಕಾಣಿಸಿದ್ದರಿಂದ ಏರ್‌ಪೋರ್ಟ್ ಸಿಬ್ಬಂದಿ ತಮ್ಮನ್ನು ತಡೆದ್ರು. ಪುರುಷ ಅಧಿಕಾರಿಗಳಿಂದ ತಪಾಸಣೆ ಮಾಡಿಸಿದ್ರು. ಕೊಠಡಿಯಲ್ಲಿ ಎಂಟು ಗಂಟೆ ಇರಿಸಿದ್ರು ಕನಿಷ್ಠ ವಾಶ್ ರೂಂಗೆ ಹೋಗಲು ಅವಕಾಶ ನೀಡಲಿಲ್ಲ. ಇದೆಲ್ಲದ್ರಿಂದ ನಾನು ವಿಮಾನ ಮಿಸ್ ಮಾಡ್ಕೊಂಡೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಮಧ್ಯೆ, ಅಮೆರಿಕಾದಲ್ಲಿ ಸಣ್ಣ ತಪ್ಪು ಮಾಡಿದ್ರೂ ವೀಸಾ ರದ್ದತಿಯ ಶಿಕ್ಷೆ ನೀಡಲು ಟ್ರಂಪ್ ಸರ್ಕಾರ ಮುಂದಾಗಿದೆ. ಸಣ್ಣಪುಟ್ಟ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ವೀಸಾವನ್ನೂ ಅಮೆರಿಕಾ ರದ್ದು ಮಾಡ್ತಿದೆ. ಇದರಿಂದ ಅಮೆರಿಕಾದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ಗಡಗಡ ನಡುಗುವಂತಾಗಿದೆ.
ಇದೇ ವೇಳೆ, ಬೈಡನ್ ಅವಧಿಯಲ್ಲಿ ಅಮೆರಿಕಾದಲ್ಲಿ ಆಶ್ರಯ ಪಡೆದವರು ತಕ್ಷಣವೇ ದೇಶ ತೊರೆಯಬೇಕು ಎಂದು ಟ್ರಂಪ್ ಸರ್ಕಾರ ಆದೇಶಿಸಿದೆ. ಅಕ್ರಮ ವಲಸಿಗರು ತಕ್ಷಣ ದೇಶ ತೊರೆಯದಿದ್ರೆ ದಿನಕ್ಕೆ ೮೬ಸಾವಿರ ರೂಪಾಯಿಯಂತೆ ದಂಡ ವಿಧಿಸೋದಾಗಿ ಹೋಂಲ್ಯಾಂಡ್ ಸೆಕ್ಯೂರಿಟಿ ಎಚ್ಚರಿಕೆ ನೀಡಿದೆ.